ಬೆಂಗಳೂರು : ಬೆಂಗಳೂರಿನಲ್ಲಿ ಮೂಲಸೌಕರ್ಯ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ ಈ ವೇಳೆ ಆರ್ ಆರ್ ನಗರ ಶಾಸಕರು ಮಾತನಾಡಿ, ಗುತ್ತಿಗೆದಾರರಿಂದ ಹೆಚ್ಚುವರಿ 25 ಪರ್ಸೆಂಟ್ ರಷ್ಟು ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶಾಸಕರಾದ ಅಶ್ವಥ್ ನಾರಾಯಣ್, ಎಸ್ಆರ್ ವಿಶ್ವನಾಥ್, ಸಿ ಕೆ ರಾಮಮೂರ್ತಿ, ಭೈರತಿ ಬಸವರಾಜ್, ಎಸ್ ಮುನಿರಾಜು, ಎಂ ಕೃಷ್ಣಪ್ಪ ಕೆ ಗೋಪಾಲಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಪ್ರತಿಭಟನೆಯಲ್ಲಿ ಸರಕಾರ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ದಿಕ್ಕಾರ ಹೋಗಿ ಆಕ್ರೋಶ ಹೊರಹಾಕಿದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣ ಇಲ್ಲ.ನಮ್ಮ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲದ ಕಾರಣ ಸಭೆ ಕರೆಯುತ್ತಿಲ್ಲ.ಗುತ್ತಿಗೆದಾರನಿಂದ ಹೆಚ್ಚುವರಿ ಶೇಕಡ 25 ರಷ್ಟು ಹಣ ಪಡೆಯುತ್ತಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ಎಟಿಎಂ ಆಗಿದೆ ಎಂದು ಶಾಸಕ ಮುನಿರತ್ನ ಆರೋಪ ಮಾಡಿದರು.
ಮಾತಿಗೆ ಮೊದಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ ಮೋದಿ ನೀಡುವ ಹಕ್ಕಿಗೆ ನಿಮ್ಮ ಚಿತ್ರ ಯಾಕೆ ಹಾಕುತ್ತೀರಾ ಕಾಂಗ್ರೆಸ್ನವರು ಬೆಂಗಳೂರಿನ ಜನರಿಗೆ ಚೊಂಬು ನೀಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದರು.