ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಎರಡು ಅಪಘಾತಗಳಲ್ಲಿ ಓರ್ವ ಕಾಲೇಜು ವಿದ್ಯಾರ್ಥಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
BIGG NEWS: ಯಾದಗಿರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಕಡ್ಡಾಯ
ಸಾಗರ ತಾಲೂಕಿನ ಖೈರಾ ಬಳಿ ಬೈಕ್ ನಿಯಂತ್ರಣ ತಪ್ಪಿ ಉರುಳಿ ಬಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಸಾಗರದ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿ ಎಲ್ಡ್ರನ್ ಫರ್ನಾಂಡಿಸ್ ಮೃತ ದುರ್ದೈವಿ. ಆನಂದಪುರ ಸಮೀಪದ ಯಡೇಹಳ್ಳಿ ನಿವಾಸಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಘಟನೆ ನಡೆದಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.