ಧಾರವಾಡ : ತಂತ್ರಜ್ಞಾನದ ಸಬಲೀಕರಣ ಎಲ್ಲಕ್ಕಿಂತ ಶಕ್ತಿಶಾಲಿ. ಜ್ಞಾನದ ಭಂಡಾರವನ್ನೇ ಇದು ತೆರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.
ಇಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ( ಐಐಐಟಿ-ಧಾರವಾಡ ) ನೂತನ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರೊಂದಿಗೆ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ವೈಜ್ಞಾನಿಕ ಸಂಶೋಧನೆ ಮನುಕುಲದ ಏಳಿಗೆಗೆಂದೇ ನಡೆಯಬೇಕು ಎಂದರು. ಐಐಐಟಿ ಅವಶ್ಯಕತೆ ನಮಗಿದೆ. ಭಾರತ ಅಭಿವೃದ್ಧಿಶೀಲ ದೇಶ. ನಮ್ಮ ಶಕ್ತಿ ನಮ್ಮ ಮಾನವ ಸಾಮರ್ಥ್ಯ. ಅದನ್ನು ಹೆಚ್ಚಿಸಿದರೆ ನಮ್ಮ ದೇಶಕ್ಕೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಭವಿಷ್ಯವಿದೆ. ಐಟಿ, ಬಿಟಿ, ಕೃತಕ ಬುದ್ದಿಮತ್ತೆ, ಇವುಗಳೆಲ್ಲಾ ನಮ್ಮ ಮಾನವ ಸಾಮರ್ಥ್ಯಗಳ ಸುಧಾರಣೆಗೆ ಸಹಕಾರಿಯಾಗಲಿದೆ. ಕಲಿಕೆ, ಶಿಕ್ಷಣದ ಮೂಲಕ ದೇಶವನ್ನು ಮುನ್ನಡೆಸಲು ಸಾಧ್ಯವಾಗಲಿದೆ. ಅದಕ್ಕಾಗಿಯೇ ಪ್ರಧಾನಮಂತ್ರಿಗಳು ಇದಕ್ಕೆ ಒತ್ತು ನೀಡಿದ್ದಾರೆ. ನಮ್ಮ ಜನಸಂಖ್ಯೆಯನ್ನು ವರವಾಗಿ ಪರಿವರ್ತನೆ ಮಡುವ ಜನನಾಯಕ ನಮ್ಮ ಪ್ರಧಾನಿಗಳು. ದೇಶದಲ್ಲಿ ಶೇ 46% ಯುವಜನಾಂಗವಿದೆ. ಅಗಾಧವಾದ ಶಕ್ತಿ ಅವರಲ್ಲಿದೆ. ಯುವಕರು ಬೆಳೆದು ದೇಶವನ್ನು ಬೆಳಸಬೇಕು ಎಂದರು.
BIG BREAKING NEWS: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ ನಡ್ಡಾ 2ನೇ ಅವಧಿಗೆ ಮುಂದುವರಿಕೆ | JP Nadda
ಭಾರತದ ಭವಿಷ್ಯದ ಕೇಂದ್ರದಲ್ಲಿ ನಾವಿದ್ದೇವೆ. ಕರ್ನಾಟಕದಲ್ಲಿ ಮೂಲ ವಿಜ್ಞಾನ, ಆರ.ಅಂಡ್ಡಿ ಮತ್ತು ತಂತ್ರಜ್ಞಾನದ ಬುನಾದಿಯನ್ನು ಅತ್ಯಂತ ಭದ್ರವಾಗಿ ಹಾಕಲಾಗಿದೆ. ಬೇರ್ಯಾವ ರಾಜ್ಯದಲ್ಲಿಯೂ ಇಷ್ಟು ಪ್ರತಿಭೆ ಮತ್ತು ತಂತ್ರಜ್ಞಾನವುಳ್ಳ ಮಾನವ ಸಂಪನ್ಮೂಲ ಇಲ್ಲ. ಇದು ನಮ್ಮ ಹಿರಿಯರ ಕೊಡುಗೆ. 50 ವರ್ಷಗಳ ಹಿಂದೆ ಸುಧಾ ಮೂರ್ತಿಯವರು ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜಿನಿಂದ ಪ್ರಥಮ ಮಹಿಳಾ ಇಂಜಿನಿಯರ್ ಆದವರು. ಇಬ್ಬರು ಮಹಾನ್ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ. ಇವರು ನಮ್ಮ ಶಕ್ತಿ, ಸಂಸ್ಕøತಿ. ಮಹಿಳೆಯರು ಕೇವಲ ಮನೆಗೆ ಸೀಮಿತರಾದವರಲ್ಲ. ಒಬ್ಬರು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೆ, ಮತ್ತೊಬ್ಬರು ಇಡೀ ದೇಶವನ್ನು ಆಳುತ್ತಿದ್ದಾರೆ. ಅವರ ಆಶೀರ್ವಾದ ನಿಮಗೆ ಸಿಗುತ್ತಿದೆ ಎಂದರು.
‘3000 ದೇವದಾಸಿಯರಿಂದ ತಯಾರಾದ ‘ಕೌದಿ’ ಯನ್ನು ರಾಷ್ಟ್ರಪತಿಗಳಿಗೆ ಗಿಫ್ಟ್ ಆಗಿ ಕೊಟ್ರು ಸುಧಾಮೂರ್ತಿ
ಘನತೆವೆತ್ತ ರಾಷ್ಟ್ರಪತಿಗಳ ಆದರ್ಶ ಎಲ್ಲರಿಗೂ ಪ್ರೇರಣೆ
ಆಧುನಿಕ ಸಂಸ್ಥೆಯನ್ನು ಭಾರತಕ್ಕೆ ಸಮರ್ಪಿಸಿದ ಭಾರತದ ಘನತೆವೆತ್ತ ರಾಷ್ಟ್ರಪತಿಗಳಿಗೆ ನನ್ನ ಧನ್ಯವಾದಗಳು. ಅವರು ಬುಡಕಟ್ಟು ಜನಾಂಗದಿಂದ ಬಂದ ರಾಷ್ಟ್ರಪತಿಯವರು ಅತ್ಯಂತ ಸರಳ ಜೀವನ ನಡೆಸಿದವರು. ಅವರ ಬದುಕಿನಲ್ಲಿ ಆದರ್ಶವೇ ಯಶಸ್ಸಿನ ಗುಟ್ಟು. ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಮುರ್ಮುರವರು ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಾಂಕಿತರಾದಾಗ ಅವರ ಊರಿನ ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಿದ್ದರು. ಇದು ನಮ್ಮೆಲ್ಲರಿಗೂ ಆದರ್ಶ, ಪ್ರೇರಣೆಯನ್ನು ನೀಡುವ ಬದುಕು ಅವರದು. ಸರಳ, ಮಾನವೀಯತೆಯ ರಾಷ್ಟ್ರಪತಿಗಳು ಇಂದಿನ ತಂತ್ರಜ್ಞಾನ ಕ್ಯಾಂಪಸ್ ನ್ನು ಉದ್ಘಾಟಿಸಿರುವುದಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.
‘ಮೈಸೂರು ದಸರಾ ವೀಕ್ಷಣೆ’ಗೆ ತೆರಳೋರಿಗೆ ಗುಡ್ ನ್ಯೂಸ್: KSRTCಯಿಂದ ‘450 ವಿಶೇಷ ಸಾರಿಗೆ ಬಸ್’ ವ್ಯವಸ್ಥೆ
ಮಾನವ ಕುಲದ ಅಭಿವೃದ್ಧಿಗೆ ನಾಂದಿ ಹಾಡಿ ತಮ್ಮ ಗಳಿಕೆಯೆಲ್ಲವನ್ನೂ ಬಳಸಿ ಪ್ರಶಸ್ತಿಯನ್ನು ಕೊಡಲು ತೀಮಾರ್ನಿಸಿದ್ದು ಆಲ್ಫ್ರೆಡ್ ನೋಬೆಲ್ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಅವರ ಹೆಸರಿಗೂ ರಾಷ್ಟ್ರಪತಿಗಳಿಗೂ ಹಾಗೂ ಐಐಐಟಿ ಸಂಸ್ಥೆಯ ಉದ್ದೇಶಗಳಿಗೂ ಆಳವಾದ ಸಂಪರ್ಕವಿದೆ. ಅಧ್ಯಾಪಕರು ತಂತ್ರಜ್ಞಾನದ ಸಹಾಯದಿಂದ ವಿದ್ಯಾರ್ಥಿಗಳನ್ನು ಸಬಲರನ್ನಾಗಿಸುತ್ತಿದ್ದಾರೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಐಐಐಟಿ-ಧಾರವಾಡದ ಆಡಳಿತ ಮಂಡಳಿ ಅಧ್ಯಕ್ಷೆ ಸುಧಾ ಮೂರ್ತಿ ಉಪಸ್ಥಿತರಿದ್ದರು.