ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವೇಕಾನಂದ ಎನ್ನುವ ಆತ್ಮಹತ್ಯೆ ಪ್ರಕರಣ ಸಂಬಂಧ ಇದೀಗ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೂಡಿಕೆದಾರರ ಒತ್ತಡದಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ ಇನ್ ವಿಷನ್ ಬೆಂಗಳೂರು ಎಂಬ ಸಂಸ್ಥೆಯನ್ನು ವಿವೇಕಾನಂದ ನಡೆಸುತ್ತಿದ್ದರು. ವಿವಿಧ ಯೋಜನೆಗಳಲ್ಲಿ ವಿವೇಕಾನಂದ ಹಣ ಹೂಡಿಕೆ ಮಾಡುತ್ತಿದ್ದ ಜನರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ಹೂಡಿಕೆ ಮಾಡುತ್ತಿದ್ದರು.
ಹಣವನ್ನು ಷೇರು ಮಾರುಕಟ್ಟೆಯಲ್ಲಿ ವಿವೇಕಾನಂದ ಹೂಡಿಕೆ ಮಾಡುತ್ತಿದ್ದ ಆದರೆ ಶೇರು ಮಾರುಕಟ್ಟೆಯಲ್ಲಿ ವಿವೇಕಾನಂದ ಗೆ ಲಾಸ್ ಆಗಿತ್ತು. ಹೂಡಿಕೆದಾರರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಒತ್ತಡ ಸೇರಿದ್ದಾರೆ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಅರ್ಚನಾಶೆಟ್ಟಿ ದೂರು ನೀಡಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಮೃತ ವಿವೇಕಾನಂದ ಪತ್ನಿ ಅರ್ಚನಾ ಶೆಟ್ಟಿ ದೂರು ನೀಡಿದ್ದಾರೆ. ಅರ್ಚನಾ ಶೆಟ್ಟಿ ಅವರ ದೂರಿನ ಅನ್ವಯ ಸಂಪಿಗೆಹಳ್ಳಿ ಪೋಲಿಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಬಿ ಎನ್ ಎಸ್ ಸೆಕ್ಷನ್ 108ರ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








