ರಾಯಚೂರು : ರಾಯಚೂರಲ್ಲಿ ಘೋರ ದುರಂತ ಒಂದು ನಡೆದಿದ್ದು, ಸಾಸಲು ಮರಿ ಬ್ರಿಡ್ಜ್ ಬಳಿ ರೈಲಿನಿಂದ ಬಿದ್ದು ಯುವಕನೊಬ್ಬ ಸಾವನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಸಲಮರಿ ಬ್ರಿಡ್ಜ್ ಬಳಿ ಈ ಒಂದು ದುರಂತ ಸಂಭವಿಸಿದೆ. ಸ್ನೇಹಿತರ ಜೊತೆಗೆ ಟ್ರಿಪ್ ಗೆ ಹೋಗಿ ಹಿಂದಿರುಗುವಾಗ ದುರ್ಘಟನೆ ಸಭಾವಿಸಿದೆ.
ಕಸಬಾ ಲಿಂಗಸುಗೂರು ನಿವಾಸಿ ಸುಮಂತ್ ಕುಮಾರ್ (18) ಎನ್ನುವ ಯುವಕ ಸಾವನಪ್ಪಿದ್ದಾನೆ. ಮೊನ್ನೆಯಷ್ಟೇ ಆರು ಜನ ಸ್ನೇಹಿತರ ಜೊತೆಗೆ ಸುಮಂತ್ರ ದಾಂಡೇಲಿಗೆ ಹೋಗಿದ್ದ ನಿನ್ನೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಸಿಂಧನೂರಿಗೆ ಸ್ನೇಹಿತರ ಜೊತೆಗೆ ಬರುತ್ತಿದ್ದ. ಸಿಂಧನೂರಿಗೆ ಬಂದವಳಿಕೆ ಸ್ನೇಹಿತರೆ ಸಿಂಧನೂರಿನ 5 ಕಿ.ಮೀ ದೂರದ ಸಾಸಲಮರಿ ಕ್ಯಾಂಪ ಬಳಿ ಆತನ ಶವ ಪತ್ತೆಯಾಗಿದೆ. ರೈಲಿನಿಂದ ಸುಮಂತ್ ಕುಮಾರ್ ಹೇಗೆ ಕೆಳಗೆ ಬಿದ್ದ ಅನ್ನೋದೇ ನಿಗೂಢವಾಗಿದೆ. ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








