ಬೆಳಗಾವಿ : ಜಿಲ್ಲೆಯಲ್ಲಿ ಗಣೇಶ ವಿಸರ್ಜನೆಯ ವೇಳೆಯಲ್ಲಿ ಉಂಟಾದಂತ ಗಲಾಟೆಯು ವಿಕೋಪಕ್ಕೆ ತಿರುಗಿತ್ತು. ಈ ಗಲಾಟೆ ವಿದ್ಯಾರ್ಥಿಯೊಬ್ಬನ ಬರ್ಬರ ಕೊಲೆಯಲ್ಲಿ ಅಂತ್ಯಗೊಂಡಿತ್ತು. ಈ ಘಟನೆ ಸಂಬಂಧ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶ ಪ್ರಕಟ: ಕರ್ನಾಟಕದ ಹುಡುಗ ಶಿಶಿರ್ಗೆ ಅಗ್ರಸ್ಥಾನ
ಬೆಳಗಾವಿ ಜಿಲ್ಲೆಯ ಯರಹಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಕಳೆದ ನಿನ್ನೆ ಅದ್ದೂರಿಯಾಗಿ ಗಣೇಶೋತ್ಸವದ ನಂತ್ರ ವಿಸರ್ಜನೆಗೆ ಮೆರವಣಿಗೆ ಆಯೋಜಿಸಲಾಗಿತ್ತು. ಈ ಮರೆವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಅರ್ಜುನ್ ಗೌಡ ಪಾಟೀಲ್ ಎಂಬಾತನನ್ನು ಯುವಕರ ತಂಡವೊಂದು ಚಾಕುವಿನಿಂದ ಬರ್ಬರವಾಗಿ ಇರಿಯಲಾಗಿತ್ತು.
ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆ ಪ್ರಕರಣ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಯ ಸಹೋದರ ಅರೆಸ್ಟ್
ಚಾಕು ಇರಿತಕ್ಕೆ ಒಳಗಾಗಿದ್ದಂತ ಅರ್ಜುನ್ ಗೌಡನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತಾದರೂ, ತೀವ್ರ ರಕ್ತಸ್ತ್ರಾವದಿಂದಾಗಿ ಅರ್ಜುನ್ ಗೌಡ ಪಾಟೀಲ್ ಸಾವನ್ನಪ್ಪಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಂತ ಯರಹಟ್ಟಿ ಠಾಣೆಯ ಪೊಲೀಸರು, ಇಂದು ಉದಯ ಭಂಡ್ರೋಳಿ, ಸುಭಾಷ ಸೋಲಣ್ಣನವರ, ವಿಠಲ ಮೀಶಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
BIG ALEART: ಸಿಲಿಂಡರ್ ಡೆಲಿವರಿ ಶುಲ್ಕ ನೀಡುವಂತಿಲ್ಲ, ಹೆಚ್ಚಿನ ಹಣ ಕೇಳಿದ್ರೆ ಇಲ್ಲಿ ದೂರು ಸಲ್ಲಿಸಿ