ಬೆಂಗಳೂರು: ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ಹಿಲ್ಸ್ ವ್ಯೂವ್ ಪಬ್ಲಿಕ್ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಂತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಡಿ.ಕೆ ಶಿವಕುಮಾರ್ ಒಡೆತನದ ಹಿಲ್ಸ್ ವ್ಯೂವ್ ಪಬ್ಲಿಕ್ ಶಾಲೆಗೆ ನಿನ್ನೆ ಹುಚ್ಚ ವೆಂಕಟ್ ಹೆಸರಿನಲ್ಲಿ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿತ್ತು. ಈ ವಿಷಯ ತಿಳಿದು ಪೊಲೀಸರಿಗೆ ಶಾಲಾಡಳಿತ ಮಾಹಿತಿ ಮುಟ್ಟಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ಆಗಮಿಸಿದ್ದಂತ ಬಾಂಬ್ ನಿಷ್ಕ್ರೀಯ ದಳದದ ಸಿಬ್ಬಂದಿ ಪರಿಶೀಲಿಸಿದಾಗ ಅದೊಂದು ಹುಸಿ ಬಾಂಬ್ ಬೆದರಿಕೆಯಾಗಿತ್ತು.
ಈ ವಸ್ತುಗಳನ್ನು ಸಡಿಲವಾಗಿ ಮಾರಾಟ ಮಾಡಿದಾಗ ಜಿಎಸ್ಟಿಯಿಂದ ವಿನಾಯಿತಿ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹುಸಿ ಬಾಂಬ್ಲ ಬೆದರಿಕೆ ಸಂದೇಶ ಕಳುಹಿಸಿದ್ದಂತ ಆರೋಪಿಗಾಗಿ ಪತ್ತೆಕಾರ್ಯ ನಡೆಸಿದ್ದರು. ಇದೀಗ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಂತ ಬಾಲಕನನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆದಿರುವಂತ ಬಾಲಕನನ್ನು ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಂದಹಾಗೇ ಬಂದಿತ ವಿದ್ಯಾರ್ಥಿ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಜುಲೈ.21ರಿಂದ ನಿಗದಿಯಾಗಿದ್ದಂತ ಪರೀಕ್ಷೆಗಳಿಗೆ ಹೆಚ್ಚು ತಯಾರಿ ಮಾಡಿರದ ಕಾರಣ, ಪರೀಕ್ಷೆ ಮುಂದೂಡಿಸುವ ಉದ್ದೇಶದಿಂದ ತಂದೆಯ ಲ್ಯಾಪ್ ಟಾಪ್ ನಲ್ಲಿ, ಹುಚ್ಚ ವೆಂಕಟ್ ಹೆಸರಿನಲ್ಲಿ ಇ-ಮೇಲ್ ಕ್ರಿಯೇಟ್ ಮಾಡಿ ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಕಳಿಸಿದ್ದಾಗಿ ತಿಳಿದು ಬಂದಿದೆ.
BREAKING NEWS: ಆ.11ರಿಂದ ರಾಜ್ಯದ ಶಾಲೆಗಳ ಮೇಲೆ 3 ದಿನ ‘ರಾಷ್ಟ್ರಧ್ವಜ ಹಾರಾಟ’ ಕಡ್ಡಾಯ – ಶಿಕ್ಷಣ ಇಲಾಖೆ ಆದೇಶ