ತಮಿಳುನಾಡು: ತಮಿಳುನಾಡಿನ ತಿರುವರೂರು ಜಿಲ್ಲೆಯ ಪೆರಲಂ ಬಳಿ 14 ವರ್ಷದ ಬಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನನ್ನು ಬೇರೆ ಶಾಲೆಗೆ ವರ್ಗಾಯಿಸುವಂತೆ ಮಾಡಿದ ಮನವಿಯನ್ನು ಪೋಷಕರು ನಿರಾಕರಿಸಿದ ಕಾರಣ, ತೀವ್ರ ನೊಂದು ಸೋಮವಾರ ಬೆಳಗ್ಗೆ ಈ ನಿರ್ಧಾರ ತೆಗೆದುಕೊಂಡಿದ್ದಾನೆ.
ಆತ್ಮಹತ್ಯೆಗೆ ಶರಣಾದ ಬಾಲಕನನ್ನು 9 ನೇ ತರಗತಿ ವಿದ್ಯಾರ್ಥಿ ಸಂಜಯ್ ಎಂದು ಗುರುತಿಸಲಾಗಿದೆ. ಸಂಜಯ್ ಪೆರಲಂನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ. ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಹೋಮ್ವರ್ಕ್ ಕೊಡುವಂತೆ ಸಂಜಯ್ಗೂ ಕೂಡ ನೀಡಲಾಗುತ್ತಿತ್ತು. ಇದರಿಂದ ಒತ್ತಡಕ್ಕೆ ಒಳಗಾದ ಸಂಜಯ್ ನನ್ನನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡುವುದಾಗಿ ಪೋಷಕರಿಗೆ ತಿಳಿಸಿದ್ದನು. ಆದರೆ, ಅವರ ಮನವಿಯನ್ನು ಪೋಷಕರು ನಿರಾಕರಿಸಿದ್ದಾರೆ.
ಇದರಿಂದ ಇನ್ನಷ್ಟು ಒತ್ತಡಕ್ಕೆ ಒಳಗಾದ ಸಂಜಯ್ ಆಗಸ್ಟ್ 22ರಂದು ಬೆಳಗ್ಗೆ ಮನೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಆತನ ಕಿರುಚಾಟ ಕೇಳಿದ ಪೋಷಕರು ಬೆಂಕಿ ಹಚ್ಚಿಕೊಂಡ ಕೊಠಡಿಗೆ ಧಾವಿಸಿ ಅವನನ್ನು ರಕ್ಷಿಸಿ ತಿರುವರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಆಗಸ್ಟ್ 23 ರಂದು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಪೆರಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BIGG NEWS: ಕರ್ನಾಟಕದ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ