Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ

GOOD NEWS: ಆಧಾರ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದು ವರ್ಷ ಉಚಿತ ಅಪ್‌ಡೇಟ್ ಗಡುವು ವಿಸ್ತರಿಸಿದ UIDAI | Aadhar

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ
KARNATAKA

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ

By kannadanewsnow57

ತುಮಕೂರು: ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅಂಗವಾಗಿ ಹಮ್ಮಿಕೊಂಡಿರುವ ‘ಸಮರ್ಪಣೆ ಸಂಕಲ್ಪ’ ಮತ್ತು ‘ಗ್ಯಾರಂಟಿ ಇಲಾಖಾ ಹಬ್ಬ’ದ ಬೃಹತ್ ಸಮಾವೇಶವು ಇಂದು (ಮೇ 19, ಮಂಗಳವಾರ) ತುಮಕೂರಿನಲ್ಲಿ ನಡೆಯಲಿದೆ.

ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 11:00 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 1,52,492 ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ, ದಾಖಲೆ ಹಾಗೂ ಆದೇಶ ಪತ್ರಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಗುತ್ತಿದೆ. ‘ಭೂ ಗ್ಯಾರಂಟಿ’ ಯೋಜನೆಯಡಿ ಈ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಂದಾಯ ಸೇವೆಗಳನ್ನು ಜನರಿಗೆ ಸರಳ, ಸುಲಭ ಹಾಗೂ ಸುಲಲಿತವಾಗಿ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಸಮಾವೇಶದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. 600 ಮಂದಿಗೆ ಅಂಗನವಾಡಿ ಉದ್ಯೋಗ ನೀಡಲಿದ್ದು, ರಾಜ್ಯದ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಇಷ್ಟು ಜನರಿಗೆ ಹಕ್ಕುಪತ್ರ ವಿತರಿಸುತ್ತಿರುವುದು ಇದೇ ಮೊದಲು. ಈ ಸಾಧನೆ ಗಿನ್ನೆಸ್ ದಾಖಲೆಗೆ ಸೇರಲಿದೆ. ಆ ಕುರಿತು ಪ್ರಮಾಣ ಪತ್ರ ಪ್ರದಾನ ಮಾಡಲು ಇಂಗ್ಲೆಂಡ್ ನಿಂದ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿಗಳು ತುಮಕೂರಿಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಮಾವೇಶದಲ್ಲಿ ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆಯ ಫಲಾನುಭವಿಗಳು ಭಾಗವಹಿಸಲಿದ್ದಾರೆ. 1,52,492 ಮಂದಿಗೆ ಹಕ್ಕುಪತ್ರ ನೀಡಲಾಗುವುದು. ಇ-ಪೌತಿ ಆಂದೋಲನ, ದರಖಾಸ್ತು ಪೋಡಿ, ಕಂದಾಯ ಗ್ರಾಮ ಪತ್ರ, ಪೋಡಿ ಮುಕ್ತ ಅಭಿಯಾನಸೇರಿದಂತೆ 1,52,492 ಮಂದಿಗೆ ಹಕ್ಕು ಪತ್ರ, ಆದೇಶ ಪತ್ರಗಳನ್ನು ವಿತರಿಸಲಾಗುವುದು.

ಕಂದಾಯ ಇಲಾಖೆಯ ಪ್ರಮುಖ ಸಾಧನೆಗಳು:

ಇ-ಪೋಡಿ ಅಭಿಯಾನ: ರಾಜ್ಯಾದ್ಯಂತ ದಾಖಲೆಯ 14.39 ಲಕ್ಷ ಪೋಡಿ ಕಾರ್ಯ ಪೂರ್ಣಗೊಳಿಸಲಾಗಿದೆ.

ದರ್ಖಾಸ್ತು ಪೋಡಿ: 2.5 ಲಕ್ಷ ಮಂಜೂರಿದಾರರಿಗೆ ಪೋಡಿ ಪ್ರಗತಿ ಕಲ್ಪಿಸಲಾಗಿದೆ.

ತುಮಕೂರು ಜಿಲ್ಲೆಯ ಸಾಧನೆಗಳು (1,52,492 ಫಲಾನುಭವಿಗಳು): ಇ-ಪೋಡಿ: 1,06,000 ಕುಟುಂಬಗಳಿಗೆ ಅನುಕೂಲ.

ಕಂದಾಯ ಗ್ರಾಮ ಹಕ್ಕುಪತ್ರ: 20,666 ಕುಟುಂಬಗಳಿಗೆ ವಿತರಣೆ.

ದರ್ಖಾಸ್ತು ಪೋಡಿ ಮತ್ತು ಪೋಡಿ ಮುಕ್ತ ಅಭಿಯಾನ: 25,826 ಫಲಾನುಭವಿಗಳಿಗೆ ಲಭ್ಯ.

ಈ ಸಮಾವೇಶದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಜನಸೇವೆಯ ಈ ಮಹತ್ವದ ಸಂಕಲ್ಪಕ್ಕೆ ಚಾಲನೆ ನೀಡಲಿದ್ದಾರೆ.

State government's 'Samarpane Sankalpa' program in Tumkur today: Title deeds distributed to over 1.52 lakh families
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

1 Min Read

BREAKING: ಮಂಡ್ಯದಲ್ಲಿ ಕಾರು-ಬಸ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಖ್ಯಾತ ವಕೀಲ, ಹೋರಾಟಗಾರ ಕಣಿವೆ ಯೋಗೇಶ್ ಸಾವು

1 Min Read

ಗೃಹಲಕ್ಷ್ಮಿ ಯೋಜನೆಯ 30ನೇ ಕಂತು ಬಿಡುಗಡೆ:3 ವರ್ಷದಲ್ಲಿ ಮಹಿಳೆಯರಿಗೆ ತಲಾ 60,000 ರೂ. ಪಾವತಿ | Gruhalakshmi

1 Min Read
Recent News

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ

GOOD NEWS: ಆಧಾರ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದು ವರ್ಷ ಉಚಿತ ಅಪ್‌ಡೇಟ್ ಗಡುವು ವಿಸ್ತರಿಸಿದ UIDAI | Aadhar

BREAKING: ಮಂಡ್ಯದಲ್ಲಿ ಕಾರು-ಬಸ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಖ್ಯಾತ ವಕೀಲ, ಹೋರಾಟಗಾರ ಕಣಿವೆ ಯೋಗೇಶ್ ಸಾವು

State News
KARNATAKA

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆಯ ಆರ್ಭಟ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 13…

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ

BREAKING: ಮಂಡ್ಯದಲ್ಲಿ ಕಾರು-ಬಸ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಖ್ಯಾತ ವಕೀಲ, ಹೋರಾಟಗಾರ ಕಣಿವೆ ಯೋಗೇಶ್ ಸಾವು

ಗೃಹಲಕ್ಷ್ಮಿ ಯೋಜನೆಯ 30ನೇ ಕಂತು ಬಿಡುಗಡೆ:3 ವರ್ಷದಲ್ಲಿ ಮಹಿಳೆಯರಿಗೆ ತಲಾ 60,000 ರೂ. ಪಾವತಿ | Gruhalakshmi

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.