Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಯರ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ ಬಿಯರ್ ಬೆಲೆ ₹80 ರವರೆಗೆ ಭಾರಿ ಇಳಿಕೆ | Beer price Down

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!
KARNATAKA

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

By kannadanewsnow57

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆಯ ಆರ್ಭಟ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 13 ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಹಾಗೂ ಮಳೆಗೆ ಸಂಬಂಧಿಸಿದ ಅವಘಡಗಳಿಂದ ಮೂವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಗದಗ, ಲಕ್ಷ್ಮೇಶ್ವರ ಹಾಗೂ ಹೊನ್ನಾಳಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗದಗ ಹೊರವಲಯದ ಒಕ್ಕಲಗೇರಿ ಓಣಿಯ ನಿವಾಸಿ, ಕುರಿಗಾಹಿ ಮರೇತಮ್ಮಪ್ಪ (52) ಎಂಬುವವರು ಮನೆಯ ಹೊರಗೆ ಮಲಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗಾಳಿ-ಮಳೆಗೆ ಹೆದ್ದಾರಿಯ ವಿದ್ಯುತ್ ಕಂಬವೊಂದು ಮುರಿದು ಬಿದ್ದ ಪರಿಣಾಮ, ಕುರಿಗಾಯಿ ಮಂಜಪ್ಪ (26) ಎಂಬ ಯುವಕ ಮೃತಪಟ್ಟಿದ್ದಾನೆ.ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಲೆಕಣಬೂರು ಗ್ರಾಮದ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ನಾಗರಾಜಪ್ಪ (45) ಎಂಬುವವರು ಮನೆಯ ಮುಂದೆ ನಿಂತು ಮಳೆ ವೀಕ್ಷಿಸುತ್ತಿದ್ದಾಗ, ಸಿಡಿಲಿನ ಭೀಕರ ಶಬ್ದಕ್ಕೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.

ಸೋಮವಾರ ಮಧ್ಯಾಹ್ನದ ನಂತರ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟಿಸಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡು ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ತಗ್ಗು ಪ್ರದೇಶಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ಸುಮಾರು 1 ಅಡಿಯಷ್ಟು ನೀರು ನಿಂತಿದ್ದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು.

ಚಾಮರಾಜನಗರ, ಶಿವಮೊಗ್ಗ, ಬಾಗಲಕೋಟೆ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾದ ವರದಿಯಾಗಿದೆ. ಮುಂಗಾರು ಪೂರ್ವ ಮಳೆಯ ಈ ಆರ್ಭಟದಿಂದಾಗಿ ರೈತರು ಮತ್ತು ಸಾರ್ವಜನಿಕರು ಆತಂಕಗೊಂಡಿದ್ದು, ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

Continued rains in the state: Three killed in lightning strikes six deaths in 2 days!
Share. Facebook Twitter LinkedIn WhatsApp Email

Related Posts

ಬಿಯರ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ ಬಿಯರ್ ಬೆಲೆ ₹80 ರವರೆಗೆ ಭಾರಿ ಇಳಿಕೆ | Beer price Down

1 Min Read

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ

2 Mins Read

BREAKING: ಮಂಡ್ಯದಲ್ಲಿ ಕಾರು-ಬಸ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಖ್ಯಾತ ವಕೀಲ, ಹೋರಾಟಗಾರ ಕಣಿವೆ ಯೋಗೇಶ್ ಸಾವು

1 Min Read
Recent News

ಬಿಯರ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ ಬಿಯರ್ ಬೆಲೆ ₹80 ರವರೆಗೆ ಭಾರಿ ಇಳಿಕೆ | Beer price Down

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ

GOOD NEWS: ಆಧಾರ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದು ವರ್ಷ ಉಚಿತ ಅಪ್‌ಡೇಟ್ ಗಡುವು ವಿಸ್ತರಿಸಿದ UIDAI | Aadhar

State News
KARNATAKA

ಬಿಯರ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ ಬಿಯರ್ ಬೆಲೆ ₹80 ರವರೆಗೆ ಭಾರಿ ಇಳಿಕೆ | Beer price Down

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತರಲಾಗಿರುವ ‘ಆಲ್ಕೋಹಾಲ್ ಇನ್ ಬೇವರೆಜ್’ (AIB) ತೆರಿಗೆ ಪದ್ಧತಿಯಿಂದಾಗಿ ಬಿಯರ್ ಪ್ರಿಯರಿಗೆ ಭರ್ಜರಿ ಸಿಹಿ…

ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ: ಸಿಡಿಲಬ್ಬರಕ್ಕೆ ಮೂವರು ಬಲಿ, 2 ದಿನದಲ್ಲಿ ಆರು ಸಾವು!

ತುಮಕೂರಿನಲ್ಲಿ ಇಂದು ರಾಜ್ಯ ಸರ್ಕಾರದ ‘ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮ: : ಇದೇ ಮೊದಲಿಗೆ 1.52 ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ ಗಿನ್ನೆಸ್ ದಾಖಲೆ

BREAKING: ಮಂಡ್ಯದಲ್ಲಿ ಕಾರು-ಬಸ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಖ್ಯಾತ ವಕೀಲ, ಹೋರಾಟಗಾರ ಕಣಿವೆ ಯೋಗೇಶ್ ಸಾವು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.