ಬೆಂಗಳೂರು: ರಾಜ್ಯ ಸರ್ಕಾರದಿಂದ ಬಾಲಾಪರಾಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಚ್ಚೆಯನ್ನು ಇರಿಸಲಾಗುತ್ತಿದೆ. ಅಲ್ಲದೇ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದಕ್ಕಾಗಿ ವಿನೂತನ ಹೆಜ್ಜೆ ಇಡಲಾಗುತ್ತಿದೆ. ಅದೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಬಾಲಾಪರಾಧಿ ಪೊಲೀಸ್ ಘಟಕವನ್ನು ಸ್ಥಾಪನೆ ಮಾಡಲಿದೆ.
BREAKING NEWS : ಚಿಕ್ಕಬಳ್ಳಾಪುರದಲ್ಲಿ ಕ್ಯಾಂಟರ್ -ಆಟೋ ನಡುವೆ ಭೀಕರ ಅಪಘಾತ ; ಮೂವರ ದುರ್ಮರಣ
ಈ ಬಗ್ಗೆ ಟ್ವಿಟ್ ನಲ್ಲಿ ಬಿಜೆಪಿ ಪಕ್ಷದಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ದೌರ್ಜನ್ಯಕ್ಕೆ ಒಳಗಾದ ಹಾಗೂ ಬಾಲಾಪರಾಧಿ ಮಕ್ಕಳ ಹಕ್ಕು ರಕ್ಷಣೆಗೆ ಮೋದಿ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ. ಈ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಬಾಲಾಪರಾಧಿ ಪೊಲೀಸ್ ಘಟಕದ ಜೊತೆ ಪ್ರತಿಯೊಂದು ಠಾಣೆಯಲ್ಲಿ ಒಬ್ಬ ಆರಕ್ಷಕರನ್ನು ನೇಮಿಸಲಿದೆ. ಇದು ಮಕ್ಕಳ ಮನಪರಿವರ್ತನೆಗೆ ಸಹಕಾರಿಯಾಗಲಿದೆ ಎಂದು ಹೇಳಿದೆ.
ದೌರ್ಜನ್ಯಕ್ಕೆ ಒಳಗಾದ ಹಾಗೂ ಬಾಲಾಪರಾಧಿ ಮಕ್ಕಳ ಹಕ್ಕು ರಕ್ಷಣೆಗೆ ಮೋದಿ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ.
ಈ ನಿಟ್ಟಿನಲ್ಲಿ @BSBommai ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಬಾಲಾಪರಾಧಿ ಪೊಲೀಸ್ ಘಟಕದ ಜೊತೆ ಪ್ರತಿಯೊಂದು ಠಾಣೆಯಲ್ಲಿ ಒಬ್ಬ ಆರಕ್ಷಕರನ್ನು ನೇಮಿಸಲಿದೆ. ಇದು ಮಕ್ಕಳ ಮನಪರಿವರ್ತನೆಗೆ ಸಹಕಾರಿಯಾಗಲಿದೆ.#BJPYeBharavase pic.twitter.com/p9LOSLrh9V
— BJP Karnataka (@BJP4Karnataka) December 11, 2022
ಅಂದಹಾಗೇ ಪ್ರತಿ ಜಿಲ್ಲೆಯಲ್ಲಿಯೂ ರಾಜ್ಯ ಸರ್ಕಾರದಿಂದ ಬಾಲಾಪರಾಧಿ ಆರಕ್ಷಕ ಘಟಕವನ್ನು ಸ್ಥಾಪನೆಯನ್ನು ಮಾಡಲಾಗುತ್ತದೆ. ಇಲ್ಲಿ ಮಕ್ಕಳ ಹಕ್ಕುಗಳಿಗೆ ಪೊಲೀಸರ ರಕ್ಷಣೆ ದೊರೆಯುವಂತ ಕೆಲಸ ಮಾಡಿ, ಮನಪರಿವರ್ತನೆಗೂ ಸಹಕಾರಿಯಾಗುವಂತ ಕೆಲಸವನ್ನು ಮಾಡಲಿದೆ.