ದಾವಣಗೆರೆ: ಗೂಂಡಾಗಳನ್ನು, ರೌಡಿಗಳನ್ನು ಪೋಷಿಸುವ ಸಂಸ್ಕೃತಿ ಕಾಂಗ್ರೆಸ್ ನದ್ದು ಆಗಿದೆ. ಕಾಂಗ್ರೆಸ್ ನಲ್ಲೇ ಎಲ್ಲಾ ರೌಡಿಗಳು ಇರೋದು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಒಬ್ಬ ರೌಡಿ ಎಂಬುದಾಗಿ ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ( MLA MP Renukacharya ) ವಾಗ್ಧಾಳಿ ನಡೆಸಿದ್ದಾರೆ.
ಹಸು-ಎಮ್ಮೆ, ಕುರಿ-ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ದಾವಣಗೆರೆಯ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿಗೆ ರೌಡಿಗಳು ಸೇರ್ಪಡೆ ವಿಚಾರವಾಗಿ ಮಾತನಾಡಿದಂತ ಅವರು, ಮ್ಯಾನ್ ಪವರ್, ಮನಿ ಪವರ್ ನಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು. ಗೂಂಡಾಗಳು, ರೌಡಿಗಳನ್ನು ಪೋಷಿಸುವ ಸಂಸ್ಕೃತಿ ಕಾಂಗ್ರೆಸ್ ನದ್ದು. ಡಿಕೆ ಶಿವಕುಮಾರ್ ( DK Shivakumar ) ಕೊತ್ವಾಲ್ ರಾಮಚಂದ್ರ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದರು.
ಗಮನಿಸಿ : ಇನ್ಮುಂದೆ ಮನೆಯಲ್ಲೇ ಕುಳಿತು `ರೇಷನ್ ಕಾರ್ಡ್’ ಗೆ ಅರ್ಜಿ ಸಲ್ಲಿಸಬಹುದು! ಹೇಗೆ ಗೊತ್ತಾ?New Ration Card
ಕಾಂಗ್ರೆಸ್ ನಲ್ಲಿಯೇ ಎಲ್ಲಾ ರೌಡಿಗಳು ಇರೋದು. ಬಿಜೆಪಿ ದೇಶಭಕ್ತರ ಪಕ್ಷ. ರೌಡಿಗಳನ್ನು ಮಟ್ಟ ಹಾಕಿದ್ದೇ ಬಿಜೆಪಿ. ಗೂಂಡಾ ಮನಸ್ಸನ್ನು ಪರಿವರ್ತನೆ ಮಾಡಿದ ಪಕ್ಷ ಇದ್ರೇ ಅದು ಬಿಜೆಪಿಯಾಗಿದೆ. ರೌಡಿಗಳ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷವಾಗಿದೆ ( Congress Party ) ಎಂಬುದಾಗಿ ಡಿಕೆ ಶಿವಕುಮಾರ್, ಕಾಂಗ್ರೆಸ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ಧಾಳಿ ನಡೆಸಿದ್ದಾರೆ.