ನವದೆಹಲಿ: ದೇಶದ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿರುವಂತ ಭಾರತೀಯ ಸ್ಟೇಟ್ ಬ್ಯಾಂಕ್, ತನ್ನ ಗ್ರಾಹಕರಿಗೆ ದೀಪಾವಳಿ ಗಿಫ್ಟ್ ನೀಡಿದೆ. ಅದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರಿಸಲಾಗಿರುವಂತ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಳ ( Interest Rates ) ಮಾಡಿದೆ.
ನಮಗೆ ಭಾರತ ಜೋಡೋ ಯಾತ್ರೆಯಲ್ಲಿನ ಜನಮನ್ನಣೆಯೇ, ಪಕ್ಷದ ಬಲವರ್ದನೆಗೆ ಉತ್ತೇಜನ – ರಮೇಶ್ ಬಾಬು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ( State Bank of India ) ಉಳಿತಾಯ ಬ್ಯಾಂಕ್ ಠೇವಣಿಗಳ ( saving bank deposits ) ಮೇಲಿನ ಬಡ್ಡಿದರಗಳನ್ನು 0.30% (30 ಬಿಪಿಎಸ್) ನಷ್ಟು ಹೆಚ್ಚಿಸಿರುವುದಾಗಿ ಘೋಷಿಸಿದೆ. 10 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಬಡ್ಡಿದರದಲ್ಲಿ ಶೇ.2.70ರಷ್ಟು ಬದಲಾವಣೆಯಾಗಿಲ್ಲ. ಪರಿಷ್ಕೃತ ದರಗಳು ಅಕ್ಟೋಬರ್ 15, 2022 ರಿಂದ ಅನ್ವಯವಾಗುತ್ತವೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
State Bank of India announces that it has increased the interest rates on saving bank deposits by 0.30% (30 bps) for the balance Rs. 10 cr & above. Interest rates for deposits below Rs 10 Cr remain unchanged at 2.70%. The revised rates are applicable from Oct 15, 2022 onwards. pic.twitter.com/S07V4dI97z
— ANI (@ANI) October 18, 2022