ವಾಷಿಂಗ್ಟನ್: ಕಾಫಿ ದೈತ್ಯ ಸ್ಟಾರ್ಬಕ್ಸ್ (Starbucks) ಗುರುವಾರ ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ (Laxman Narasimhan) ಅವರನ್ನು ಹೆಸರಿಸಿದೆ.
ಲಕ್ಷ್ಮಣ್ ಅಕ್ಟೋಬರ್ 1 ರಂದು ಕಂಪನಿಗೆ ಸೇರಿಕೊಳ್ಳಲಿದ್ದಾರೆ. ಏಪ್ರಿಲ್ 2023ರಲ್ಲಿ ಪ್ರಸ್ತುತ ಸಿಇಒ ಹೊವಾರ್ಡ್ ಷುಲ್ಟ್ಜ್ ನಿರ್ಗಮನದ ನಂತ್ರ ಲಕ್ಷ್ಮಣ್ ಈ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಸ್ವತಂತ್ರ ಸ್ಟಾರ್ಬಕ್ಸ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಮೆಲೋಡಿ ಹಾಬ್ಸನ್ ಅವರು ಲಕ್ಷ್ಮಣ್ ನರಸಿಂಹನ್ ಅವರನ್ನು ʻಸ್ಫೂರ್ತಿದಾಯಕ ನಾಯಕʼ ಎಂದು ಕರೆದಿದ್ದಾರೆ. “ಜಾಗತಿಕ ಗ್ರಾಹಕರು ಎದುರಿಸುತ್ತಿರುವ ವ್ಯವಹಾರಗಳಲ್ಲಿ ಕಾರ್ಯತಂತ್ರದ ಬಗೆಗಿನ ಅವರ ಪ್ರಾಯೋಗಿಕ ಅನುಭವವು ಸ್ಟಾರ್ಬಕ್ಸ್ನ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ನಮ್ಮ ಮುಂದಿರುವ ಅವಕಾಶಗಳನ್ನು ಈಡೇರಿಸಿಕೊಳ್ಳಲು ಸೂಕ್ತವಾದ ಆಯ್ಕೆಯಾಗಿದೆ” ಎಂದು ಅವರು ಹೇಳಿದರು.
ನರಸಿಂಹನ್ ಅವರು ಡ್ಯೂರೆಕ್ಸ್ ಕಾಂಡೋಮ್ಗಳು, ಎನ್ಫಾಮಿಲ್ ಬೇಬಿ ಫಾರ್ಮುಲಾ ಮತ್ತು ಮ್ಯೂಸಿನೆಕ್ಸ್ ಕೋಲ್ಡ್ ಸಿರಪ್ಗಳನ್ನು ತಯಾರಿಸುವ ರೆಕಿಟ್ನ ಸಿಇಒ ಆಗಿದ್ದರು. ಅವರು ಈ ಹುದ್ದೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು.
ಹಣ ಸುಲಿಗೆ ಆರೋಪ: ಮೂರನೇ ಬಾರಿಗೆ ಮೇಘಾಲಯ ಬಿಜೆಪಿ ನಾಯಕ ʻಬರ್ನಾಡ್ ಎನ್ ಮರಕ್ʼ ಅರೆಸ್ಟ್
Rain In Karnataka : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ಇಂಜಿನ್ನಲ್ಲಿ ವೈಬ್ರೇಷನ್: ಉದಯಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್| IndiGo