ಬೆಂಗಳೂರು: ಚುನಾವಣಾ ಆಯೋಗದಿಂದ ( Election Commission ) ಮತದಾರರ ಪಟ್ಟಿಯ ( Voter List ) ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಹಮ್ಮಿಕೊಳ್ಳಲಾಗಿದೆ. ಹೊಸ ಮತದಾರರ ನೊಂದಣಿ ಸೇರಿದಂತೆ ತಿದ್ದುಪಡಿ, ಕ್ಷೇತ್ರ ಬದಲಾವಣೆಗೂ ಅವಕಾಶ ನೀಡಲಾಗಿದೆ. ಹಾಗಾದ್ರೇ ಯಾವ ಅರ್ಜಿ ನಮೂನೆ ಯಾವುದಕ್ಕೆ ಸಲ್ಲಿಸಬೇಕು ಎನ್ನುವ ಬಗ್ಗೆ ಮುಂದೆ ಓದಿ.
ಲಘು, ಭಾರಿ ವಾಹನ ತರಬೇತಿ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: BMTCಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಬದಲಾವಣೆ ಮಾಡಬಯಸಿದ್ದಲ್ಲಿ, Voter Helpline Application ಕೂಡ ಡೌನ್ ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಇದಲ್ಲದೇ www.nvsp.in ಜಾಲತಾಣಕ್ಕೂ ಭೇಟಿ ನೀಡಿ, ಲಾಗಿನ್ ಆಗಿ ಆನ್ ಲೈನ್ ಮೂಲಕವೂ ಸಲ್ಲಿಸಲು ಅವಕಾಶ ನೀಡಲಾಗಿದೆ.
ALEART: ನಿಮ್ಮ ಮೊಬೈಲ್ ಕಳೆದು ಹೋಗಿದ್ಯಾ? ಪೋನ್ ಪೇ, ಗೂಗಲ್ ಪೇ ಬಗ್ಗೆ ಈ ಎಚ್ಚರಿಕೆ ಕೂಡಲೇ ವಹಿಸಿ.!
ದಿನಾಂಕ 09-11-2022ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಏನಾದರೂ ಬದಲಾವಣೆಗಳಿದ್ದರೇ ಈ ಕೆಳಕಂಡಂತೆ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ನಿಮಗೆ ಅವಶ್ಯಕವಿರುವ ಈ ಕೆಳಕಂಡ ಅರ್ಜಿ ನಮೂನೆಗಳನ್ನು ಆಯ್ಕೆಮಾಡಿಕೊಳ್ಳಿ
- ನಮೂನೆ-6
ಈ ನಮೂನೆಯ ಅರ್ಜಿಯನ್ನು ನೀವು ಹೊಸದಾಗಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳೋದಕ್ಕೆ ಸಲ್ಲಿಸಬಹುದಾಗಿದೆ. ನಮೂನೆ-6ರ ಮೂಲಕ ಹೊಸ ಮತದಾರರ ನೋಂದಣಿಗಾಗಿ ಅರ್ಜಿಯನ್ನು ಹಾಕಬಹುದಾಗಿದೆ.
ಈ ಬಾರಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ? ಈ ಕುರಿತು ಹೇಳಿದ್ದೇನು ಗೊತ್ತಾ?
- ನಮೂನೆ-7
ಮತದಾರರ ಪಟ್ಟಿಯಿಂದ ಹೆಸರನ್ನು ನೀವು ತೆಗೆಸಬೇಕು ಅನಿಸಿದ್ರೇ, ನಮೂನೆ-7ರಲ್ಲಿ ಅರ್ಜಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬಹುದಾಗಿದೆ. ಈ ಬಳಿಕ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ.
- ನಮೂನೆ-6(ಬಿ)
ನೀವು ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡೋದಕ್ಕೆ ಬಳಕೆ ಮಾಡಿ. ನಮೂನೆ-6(ಬಿ) ಮೂಲಕ ಆಧಾರ್ ಸಂಖ್ಯೆಯನ್ನು ವೋಟರ್ ಐಡಿಗೆ ಲಿಂಕ್ ಮಾಡಬಹುದಾಗಿದೆ.
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಎರಡನೇ ಸ್ಥಾನದಲ್ಲಿ ಕರ್ನಾಟಕ
- ನಮೂನೆ-8
ಮತದಾರರು ವಾಸಸ್ಥಳ ಬದಲಾವಣೆ, ಬದಲಿ ಮತದಾರರ ಗುರುತಿನ ಚೀಟಿ ನೀಡುವಿಕೆಗಾಗಿ, ವೋಟರ್ ಐಡಿಯಲ್ಲಿನ ತಿದ್ದುಪಡಿಗಳಿಗಾಗಿ, ಅಂಗವಿಕಲ ವ್ಯಕ್ತಿಯನ್ನು ಮತಾದರರ ಪಟ್ಟಿಯಲ್ಲಿ ಗುರುತಿಸಲು ಈ ನಮೂನೆ-8ರಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಿಶೇಷ ನೋಂದಣಿ ಅಭಿಯಾನದ ಪ್ರಮುಖ ದಿನಾಂಕಗಳು
- ದಿನಾಂಕ 12-11-2022
- ದಿನಾಂಕ 20-11-2022
- ದಿನಾಂಕ 03-12-2022
- ದಿನಾಂಕ 04-12-2022
ಗಮನಿಸಿ, ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿಮ್ಮ ಸಮೀಪದ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ, ಈ ವಿಶೇಷ ನೋಂದಣಿ ಅಭಿಯಾನದ ಪ್ರಯೋಜನವನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಶುಲ್ಕರಹಿತ ಮತದಾರರ ಸಹಾಯವಾಣಿ ಸಂಖ್ಯೆ 1950ಗೆ ಕರೆ ಮಾಡಿ.
— Chief Electoral Officer, Karnataka (@ceo_karnataka) November 11, 2022