Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಐವರ ಅರೆಸ್ಟ್, 8 ಕೋಟಿ ಮೌಲ್ಯದ ಗಾಂಜಾ ವಶ!

​ಭಾರತದ ಸುಧಾರಣೆಯ ವೇಗ ಎಂದಿಗೂ ನಿಲ್ಲದು, ಸ್ಟಾರ್ಟ್‌ಅಪ್ ವ್ಯವಸ್ಥೆ ಮತ್ತಷ್ಟು ವಿಸ್ತರಣೆಯಾಗಲಿದೆ: ಫ್ರಾನ್ಸ್‌ನಲ್ಲಿ ಪ್ರಧಾನಿ ಮೋದಿ ಭರವಸೆ

​ಬಾರ್ಸಿಲೋನಾ ಗ್ರಾಂಡ್ ಪ್ರಿಕ್ಸ್‌ನಲ್ಲಿ ಲೂಯಿಸ್ ಹ್ಯಾಮಿಲ್ಟನ್‌ಗೆ ಐತಿಹಾಸಿಕ ಜಯ; ಫೆರಾರಿ ಪರ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡ ದಿಗ್ಗಜ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಕೆರೆ ಪುನರುಜ್ಜಿವನ ಶುಲ್ಕ ವಿನಿಯೋಗಿಸುವ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!
KARNATAKA

BIG NEWS : ರಾಜ್ಯದಲ್ಲಿ ಕೆರೆ ಪುನರುಜ್ಜಿವನ ಶುಲ್ಕ ವಿನಿಯೋಗಿಸುವ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!

By kannadanewsnow57

ಬೆಂಗಳೂರು : ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು / ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಕಲಂ 18 (1-A) ರಡಿಯಲ್ಲಿ ಪಾವತಿಸಿಕೊಳ್ಳುವ ಕೆರೆ ಪುನರುಜ್ಜಿವನ ಶುಲ್ಕವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.

ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳಲ್ಲಿ ಸಂಗ್ರಹಿಸಲಾಗುತ್ತಿರುವ ಕೆರೆ ಪುನರುಜೀವನ ಶುಲ್ಕವನ್ನು ವಿನಿಯೋಗಿಸಲು ಉಲ್ಲೇಖಿತ ಸುತ್ತೋಲೆಯಲ್ಲಿ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿರುತ್ತದೆ.

ಸದರಿ ಸುತ್ತೋಲೆ ಅನುಸಾರ ಕೆರೆ ಪುನರುಜೀವನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸುತ್ತೋಲೆಯಲ್ಲಿನ ಮಾರ್ಗಸೂಚಿಗಳು ಸುಧೀರ್ಘ ಪ್ರಕ್ರಿಯೆಗಳನ್ನು ಒಳಗೊಂಡಿರುವುದರಿಂದ ವಿಳಂಬಕ್ಕೆ ಕಾರಣವಾಗುತ್ತಿರುವುದಾಗಿ ವಿವಿಧ ಪ್ರಾಧಿಕಾರಗಳಿಂದ ವರದಿಗಳನ್ನು ಸ್ವೀಕರಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಸುತ್ತೋಲೆಯಲ್ಲಿನ ವಿಳಂಬಕ್ಕೆ ಕಾರಣವಾಗುವ ಅಂಶಗಳನ್ನು ಸರಳೀಕರಣಗೊಳಿಸಿ ಮಾರ್ಪಡಿತ ಮಾರ್ಗಸೂಚಿಗಳನ್ನು ಹೊರಡಿಸುವುದು ಅವಶ್ಯಕವಾಗಿರುತ್ತದೆ.

ಮಾರ್ಪಡಿತ ಮಾರ್ಗಸೂಚಿಗಳನ್ವಯ ಕೆರೆ ಪುನರುಜ್ಜಿವನ ಕಾಮಗಾರಿಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳಿಂದ ತ್ವರಿತವಾಗಿ ಹಾಗೂ ಸುಗಮವಾಗಿ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಕರಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳು/ಮಂಡಳಿಗಳು ನೀಡಬೇಕಾಗಿರುವ ನಿರಾಕ್ಷೇಪಣಾ ಪತ್ರಗಳನ್ನು ನಿಗಧಿತ ಕಾಲಮಿತಿಯಲ್ಲಿ ಒಂದೇ ಸೂರಿನಡಿ ಒದಗಿಸಿಕೊಡುವ ಉದ್ದೇಶದಿಂದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ ಏಕ ಗವಾಕ್ಷಿ ಸಮಿತಿಯನ್ನು ರಚಿಸಲಾಗಿದೆ:

ಮೇಲ್ಕಂಡ ಏಕಗವಾಕ್ಷಿ ಸಮಿತಿಯ ಕರ್ತವ್ಯ ಹಾಗೂ ಜವಾಬ್ದಾರಿಗಳು ಈ ಕೆಳಕಂಡಂತಿರುತ್ತವೆ:

1. ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಮಾತ್ರ ಆಯ್ಕೆ ಮಾಡತಕ್ಕದ್ದು.

2. ಕರೆಗಳನ್ನು ಆಯ್ಕೆ ಮಾಡುವಾಗ ಕುಡಿಯುವ ನೀರಿಗೆ ಬಳಸುವ ಉದ್ದೇಶಕ್ಕೆ ಆದ್ಯತೆ ನೀಡತಕ್ಕದ್ದು.

3. ಕೆರೆಯ ಮಾಲೀಕತ್ವ ಹೊಂದಿರುವ ಇಲಾಖೆ /ಮಂಡಳಿ /ಸ್ಥಳೀಯ ಸಂಸ್ಥೆಗಳು ಕಂದಾಯ ದಾಖಲೆಗಳನ್ನಯ ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಗಡಿಗಳನ್ನು ಗುರುತಿಸಿ, ಯಾವುದೇ ಒತ್ತುವರಿ ಆಗಿದ್ದಲ್ಲಿ, ತೆರವುಗೊಳಿಸಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅಭಿವೃದ್ಧಿಗಾಗಿ ಹಸ್ತಾಂತರಿಸಲು ಕ್ರಮವಹಿಸತಕ್ಕದ್ದು.

4. ಕಲ್ಮಶ/ತ್ಯಾಜ್ಯದಿಂದ ಕಲುಷಿತಗೊಂಡ ಕೆರೆಗಳಿದ್ದಲ್ಲಿ ಸದರಿ ಕೆರೆಯ ಲಭ್ಯ ನೀರಿನ ಗರಿಷ್ಠ ಬಳಕೆಗೆ ಅನುಗುಣವಾಗಿ ಆದ್ಯತೆ ನೀಡುವುದು.

5. ಆಯ್ಕೆ ಮಾಡಿದ ಕೆರೆಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳಾದ ತಡ ಬೇಲಿ ನಿರ್ಮಾಣ, ಕೆರೆ ಹೂಳು ತೆಗೆಯುವುದು ಮತ್ತು ಕೆರೆಯ ನೀರಿನ ಸಂಗ್ರಹಣೆ ಹೆಚ್ಚಿಸುವ ನಿಟ್ಟಿನಲ್ಲಿ ಅಂತರ್‌ ಜಲವನ್ನು ಮರು ಪೂರ್ಣಗೊಳಿಸುವುದು, ಕೆರೆ ಒತ್ತುವರಿ ತಡೆಯಲು ಅಗತ್ಯ ಗಿಡ ಮರಗಳನ್ನು ಕೆರೆಯ ಎಲ್ಲೆಯಲ್ಲಿ ಬೆಳಸುವುದು, ಕೆರೆ ನೀರಿನ ಶುದ್ದೀಕರಣ, ನೀರಿನ ಗುಣ ಮಟ್ಟವನ್ನು ಸುಧಾರಿಸುವುದು, ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯುವ ಕಾಮಗಾರಿ, ವಾಯು ವಿಹಾರಕ್ಕೆ ಅಗತ್ಯವಿರುವ ಪಾದಚಾರಿ ಮಾರ್ಗ, ಪ್ರವಾಸೋದ್ಯಮ ಉತ್ತೇಜಿಸುವ ಕಾಮಗಾರಿಗಳು ಹಾಗೂ ಇನ್ನಿತರೆ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಾಧಿಕಾರಗಳಿಗೆ ಮಾರ್ಗದರ್ಶನ ನೀಡತಕ್ಕದ್ದು.

6. ಸಮಿತಿಯು ಪ್ರಾಧಿಕಾರಗಳಿಗೆ ವಿಸ್ತ್ರತ ಯೋಜನಾ ವರದಿ (DPR) ತಯಾರಿಸಲು ಅಗತ್ಯ ಸಲಹೆ/ಸೂಚನೆಗಳನ್ನು ನೀಡುವುದು.

ಏಕಗವಾಕ್ಷಿ ಸಮಿತಿಯು ಆಯ್ಕೆ ಮಾಡುವ ಕೆರೆ ಹಾಗೂ ನೀಡಿರುವ ಸಲಹೆ/ಸೂಚನೆಗಳನ್ನು ಪರಿಗಣಿಸಿ, ಕೆರೆಯ ಪುನರುಜ್ಜಿವನ ಹಾಗೂ ಸಂರಕ್ಷಣೆಗಾಗಿ ವಿಸ್ತ್ರತ ಯೋಜನಾ ವರದಿ(DPR) ಯನ್ನು ಸಂಬಂಧಿಸಿದ ನಗರಾಭಿವೃದ್ಧಿ ಪ್ರಾಧಿಕಾರಗಳು, ಯೋಜನಾ ಪ್ರಾಧಿಕಾರಗಳು ಹಾಗೂ ಪುರಸಭೆ ಯೋಜನಾ ಪ್ರಾಧಿಕಾರಗಳು ಸಿದ್ಧಪಡಿಸಿ, ಅಗತ್ಯ ದಾಖಲಾತಿಗಳೊಡನೆ ಸರ್ಕಾರದ ಪೂರ್ವಾನುಮತಿಗಾಗಿ ಸಲ್ಲಿಸತಕ್ಕದ್ದು.

BIG NEWS: Government issues guidelines on spending lake restoration fees in the state!
Share. Facebook Twitter LinkedIn WhatsApp Email

Related Posts

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಐವರ ಅರೆಸ್ಟ್, 8 ಕೋಟಿ ಮೌಲ್ಯದ ಗಾಂಜಾ ವಶ!

1 Min Read

ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ಮಹಿಳೆಗೆ ಲೈಂಗಿಕ ಕಿರುಕುಳ; ನಾಳೆ ಅಮಾನತಿಗೆ ಆಗ್ರಹಿಸಿ ‘DSS ಪ್ರತಿಭಟನೆ’

1 Min Read

ಬೆಂಗಳೂರಲ್ಲಿ ಪ್ರಿಯಕರನಿಂದಲೇ ಯುವತಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್! ಮದುವೆ ವಿಷಯ ಮುಚ್ಚಿಟ್ಟು ಪ್ರೀತಿ, ಕೊನೆಗೆ ಕಗ್ಗೊಲೆ!

2 Mins Read
Recent News

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಐವರ ಅರೆಸ್ಟ್, 8 ಕೋಟಿ ಮೌಲ್ಯದ ಗಾಂಜಾ ವಶ!

​ಭಾರತದ ಸುಧಾರಣೆಯ ವೇಗ ಎಂದಿಗೂ ನಿಲ್ಲದು, ಸ್ಟಾರ್ಟ್‌ಅಪ್ ವ್ಯವಸ್ಥೆ ಮತ್ತಷ್ಟು ವಿಸ್ತರಣೆಯಾಗಲಿದೆ: ಫ್ರಾನ್ಸ್‌ನಲ್ಲಿ ಪ್ರಧಾನಿ ಮೋದಿ ಭರವಸೆ

​ಬಾರ್ಸಿಲೋನಾ ಗ್ರಾಂಡ್ ಪ್ರಿಕ್ಸ್‌ನಲ್ಲಿ ಲೂಯಿಸ್ ಹ್ಯಾಮಿಲ್ಟನ್‌ಗೆ ಐತಿಹಾಸಿಕ ಜಯ; ಫೆರಾರಿ ಪರ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡ ದಿಗ್ಗಜ!

​ಡಿಜಿಟಲ್ ಲಗ್ನ ಪತ್ರಿಕೆ ಹಗರಣ: ‘ವೆಡ್ಡಿಂಗ್ ಇನ್ವಿಟೇಶನ್ ಲಿಂಕ್’ ಕ್ಲಿಕ್ ಮಾಡಿ ₹5.3 ಲಕ್ಷ ಕಳೆದುಕೊಂಡ ಉದ್ಯಮಿ!

State News
KARNATAKA

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಐವರ ಅರೆಸ್ಟ್, 8 ಕೋಟಿ ಮೌಲ್ಯದ ಗಾಂಜಾ ವಶ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬ್ಯಾಂಕಾಕ್‌ನಿಂದ ಅಕ್ರಮವಾಗಿ…

ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ಮಹಿಳೆಗೆ ಲೈಂಗಿಕ ಕಿರುಕುಳ; ನಾಳೆ ಅಮಾನತಿಗೆ ಆಗ್ರಹಿಸಿ ‘DSS ಪ್ರತಿಭಟನೆ’

ಬೆಂಗಳೂರಲ್ಲಿ ಪ್ರಿಯಕರನಿಂದಲೇ ಯುವತಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್! ಮದುವೆ ವಿಷಯ ಮುಚ್ಚಿಟ್ಟು ಪ್ರೀತಿ, ಕೊನೆಗೆ ಕಗ್ಗೊಲೆ!

SHOCKING: ರಾಜ್ಯದಲ್ಲೊಂದು ಧಾರುಣ ಘಟನೆ: ಬಳ್ಳಾರಿಯಲ್ಲಿ ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.