ಬೆಂಗಳೂರು: ಇಂದಿನ ಬದಲಾದ ಜೀವನ ಶೈಲಿಯ ಆಧಾರದ ಮೇಲೆ ವಿಚ್ಛೇದಿತ ಮಹಿಳೆಗೆ ವಿಶೇಷ ಹಿಂದೂ ಕಾಯಿದೆಯಡಿ ಜೀವನಾಂಶ ಹೆಚ್ಚಳ ಮಾಡುವುದಕ್ಕೆ ಅವಕಾಶವಿದೆ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಹೆಚ್ಚುವರಿ ಜೀವನಾಂಶವನ್ನು ಪತ್ನಿಗೆ ನೀಡುವುದಕ್ಕೆ ಆದೇಶಿಸಿದೆ.
ಈ ಕುರಿತು ಹೈಕೋರ್ಟ್ ಗೆ ಸಲ್ಲಿಸಿರುವಂತ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನೊಳಗೊಂಡಂತ ನ್ಯಾಯಪೀಠವು, 10 ಸಾವಿರ ರೂಗಳ ಜೀವನಾಂಶ ಪರಿಹಾರವನ್ನು 20 ಸಾವಿರಕ್ಕೆ ಹೆಚ್ಚಳ ಮಾಡಿ ಆದೇಶಿಸಿದರು.
ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳು, ಎಲ್ಲಾ ನಿಗಮಗಳು ನಿಷ್ಕ್ರೀಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ
ಅಂದಹಾಗೇ ಶೈಲಜಾ ಎಂಬುವರು ನವೆಂಬರ್ 12, 2010ರಂದು ವಿವಾಹವಾಗಿದ್ದರು. ಈ ಬಳಿಕ ಕೌಟಂಬಿಕ ಗೊಂದಲಗಳಿಂದ ಪತಿಯಿಂದ ದೂರವಾಗಿ, ಬಳಿಕ ವಿವಾಹವನ್ನು ಮರುಸ್ಥಾಪಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೇ ಅವರ ಪತಿ ಮಾತ್ರ ವಿವಾಹ ರದ್ದು ಮಾಡುವಂತೆ ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
2016ರಲ್ಲಿ ಕೌಟುಂಬಿಕ ನ್ಯಾಯಾಲಯವು 10 ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಆದ್ರೇ ಈಗಿನ ಬದಲಾದ ಪರಿಸ್ಥಿತಿಯ ಕಾಲಘಟ್ಟದಲ್ಲಿ ಜೀವನಾಂಶ ಹೆಚ್ಚಳಕ್ಕಾಗಿ ಕೌಟಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸ್ವತಃ ಮುಖ್ಯಮಂತ್ರಿಯೇ ಕ್ರಿಮಿನಲ್ಗಳ ಸಮರ್ಥನೆಗೆ ಇಳಿದರೆ ಇನ್ನೇನಾದೀತು- ಕಾಂಗ್ರೆಸ್ ಕಿಡಿ
ಈ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಬದಲಾದ ಸನ್ನಿವೇಶದಲ್ಲಿ ಪತ್ನಿಯಾದವಳು ಜೀವನ ಶೈಲಿಯ ವಿಧಾನದ ಬಗ್ಗೆ ವಿವರಿಸೋ ಅಗತ್ಯವಿಲ್ಲ. ಅಲ್ಲದೇ ಜೀವನಾಂಶ ಹೆಚ್ಚಳಕ್ಕಾಗಿ ವಿಶೇಷ ಹಿಂದೂ ಕಾಯಿದೆಯಡಿ ನ್ಯಾಯಾಲಯಕ್ಕೆ ಅವಕಾಶವಿದೆ ಎಂಬುದಾಗಿಯೂ ಅಭಿಪ್ರಾಯ ಪಟ್ಟರು.