ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿ ಇದ್ದಾನೆ ಎಂದು ಎಸ್ಐಟಿಗೆ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆಯ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಎಲ್ಲಿದ್ದಾನೆ ಎಂಬುದು ಎಸ್ಐಟಿಗೆ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಜಿ ಪರಮೇಶ್ವರ್ ತಿಳಿಸಿದರು. ಎಸ್ಐಟಿ ತನಿಖೆಯ ವೇಳೆ ನಾವು ಯಾವುದನ್ನು ಹೇಳಲು ಆಗುವುದಿಲ್ಲ ಎಂದು ಅವರು ತಿಳಿಸಿದರು.
ಪ್ರಕರಣದ ಹಿಂದೆ ದೊಡ್ಡ ತಿಮಿಂಗಲ ಇದೆ ಎಂದು HD ಕುಮಾರಸ್ವಾಮಿ ಅವರು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಾಗಾದರೆ ತಿಮಿಂಗಲ ಯಾರು ಅಂತ ಕುಮಾರಸ್ವಾಮಿಗೆ ಗೊತ್ತಿದೆ. ಅದನ್ನು ಹೇಳದೇ ಇರುವುದೇ ದೊಡ್ಡ ತಪ್ಪಲ್ವಾ? ತಿಮಿಂಗಲ ಯಾರು ಅಂತ ಎಚ್ ಡಿ ಕುಮಾರಸ್ವಾಮಿ ಹೇಳಿ ಬಿಡಲಿ. ಪ್ರಜ್ವಲ್ ಎಲ್ಲಿದ್ದಾನೆ ಎಂದು ನಿಮಗೆ ಏನಾದರೂ ಗೊತ್ತಿದೆಯಾ? ಗೊತ್ತಿದ್ದರೆ ಹೇಳಿ ನಮಗೂ ಸ್ವಲ್ಪ ಸಹಾಯ ಆಗುತ್ತದೆ ಎಂದು ತಿರುಗೇಟು ನೀಡಿದರು.
ಸಾಹಿತಿಗಳು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಪತ್ರವನ್ನು ತರಿಸಿಕೊಂಡು ಓದುತ್ತೇನೆ ಪ್ರಜ್ವಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅವರು ಉಲ್ಲೇಖ ಮಾಡಿದ್ದನ್ನು ಎಸ್ಐಡಿ ಪರಿಗಣಿಸುತ್ತದೆ ಸಿಎಂ ಜೊತೆಗೆ ಹೇಳುವ ವಿಚಾರ ಏನು ಇಲ್ಲ. ಸಿಎಂ ಕಡೆಯಿಂದ ಕೆಲಸ ಸೂಚನೆ ಇದೆ ಆದರೆ ಹೇಳಲು ಆಗುವುದಿಲ್ಲ ಎಂದು ತಿಳಿಸಿದರು.