ಬೆಂಗಳೂರು: ನಗರದಲ್ಲಿ ಸಾರ್ವಜನಿಕರಿಗಾಗಿ ವಿವಿಧ ಮಾಹಿತಿ, ದೂರು ಸಲ್ಲಿಕೆಗಾಗಿ ಇದ್ದಂತ ವೆಬ್ ಸೈಟ್ ( Website ) ವಿಳಾಸವನ್ನು ಬೆಂಗಳೂರು ನಗರ ಪೊಲೀಸರು ( Bengaluru City Police – BCP ) ಬದಲಾವಣೆ ಮಾಡಿದ್ದಾರೆ. ಈ ಬಳಿಕ ನೂತನ ಸೈಟ್ ಜಾಲತಾಣವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ.
BIG NEWS: ರಾಜ್ಯ ಬಿಜೆಪಿ ಸರ್ಕಾರ ಕಿತ್ತೊಗೆಯುವುದೇ ನನ್ನ ಗುರಿ – ಮಾಜಿ ಸಿಎಂ HD ಕುಮಾರಸ್ವಾಮಿ ಗುಡುಗು
ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ( Pratap Reddy IPS ) ಆದೇಶ ಹೊರಡಿಸಿದ್ದು, ಸುರಕ್ಷತಾ ದೃಷ್ಠಿಯಿಂದ ಬೆಂಗಳೂರು ನಗರ ಪೊಲೀಸ್ ವೆಬ್ ಸೈಟ್ ವಿಳಾಸವನ್ನು ಬದಲಾವಣೆ ಮಾಡಲಾಗಿದೆ. ಈ ಮೊದಲು ಇದ್ದಂತ www.bcp.gov.in ಬದಲಾಯಿಸಲಾಗಿದೆ. ನೂತನ ಜಾಲತಾಣ www.bcp.karnataka.gov.in ಆಗಿದೆ ಎಂಬುದಾಗಿ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ’36 ರಾಕೆಟ್’ಗಳನ್ನು ಉಡಾಯಿಸಿದೆ – ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ| Ukraine
ಬೆಂಗಳೂರಿನ ಜನರು ಈ ಜಾಲತಾಣಕ್ಕೆ ಭೇಟಿ ನೀಡಿ ವಿವಿಧ ಮಾಹಿತಿಗಾಗಿ ಪಡೆಯಬಹುದಾಗಿದೆ. ಅಲ್ಲದೇ ದೂರುಗಳನ್ನು ಕೂಡ ಸಲ್ಲಿಸಬಹುದಾಗಿದೆ. ಇನ್ಮುಂದೆ ಬೆಂಗಳೂರು ನಗರ ಪೊಲೀಸರ ವೆಬ್ ಸೈಟ್ ತಾಣ www.bcp.karnataka.gov.in ಆಗಿರಲಿದೆ. ಎಲ್ಲರೂ ಇದಕ್ಕೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ.
‘ಚಾಮರಾಜನಗರ’ದಲ್ಲಿ ಅದ್ದೂರಿಯಾಗಿ ನಡೆದ ‘ವಿದ್ಯಾಗಣಪತಿ ವಿಸರ್ಜನೆ ಶೋಭಾಯಾತ್ರೆ’