ಬೆಂಗಳೂರು: ಕೊಡಗಿನ ಪ್ರವಾಸದ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರ ಕಾರಿನ ಮೇಲೆ, ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ್ದರು. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ನಾಯಕರು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಾಗಿ ತೀವ್ರ ವಾಗ್ಧಾಳಿ ನಡೆಸಿದ್ದರು. ಈ ಬೆನ್ನಲ್ಲೇ ಸಿಎಂ ಬೊಮ್ಮಾಯಿ, ಮೊಟ್ಟೆ ಎಸೆದ ವಿಚಾರವನ್ನು ಸಂಪೂರ್ಣವಾಗಿ ತನಿಖೆ ನಡೆಸೋದಕ್ಕೆ ಆದೇಶಿಸಿದ್ದಾರೆ.
Janmashtami Special : ಕೃಷ್ಣ ಭಕ್ತರೇ, ವಿಶ್ವದ ಅತಿ ದೊಡ್ಡ ‘ಶ್ರೀಕೃಷ್ಣ ದೇವಾಲಯ’ ಎಲ್ಲಿದೆ.? ಹೇಗಿದೆ ಗೊತ್ತಾ.?
ಈ ಕುರಿತಂತೆ ಇಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ), ಸಿದ್ದರಾಮಯ್ಯ ಜೊತೆಗೆ ಮಾತನಾಡಿದ್ದೇನೆ. ಅವರಿಗೆ ಜೀವಭಯ, ಬೆದರಿಕೆ ಇರೋ ಬಗ್ಗೆಯೂ ಮಾತನಾಡಿ ಭರವಸೆ ನೀಡಿದ್ದೇನೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಸಂಪೂರ್ಣವಾಗಿ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದೇನೆ ಎಂದರು.
ಶಿವಮೊಗ್ಗ: ನಾಳೆ ‘ಸೊರಬ ತಾಲೂಕಿ’ನ ಆನವಟ್ಟಿಯ ಲಕ್ಕವಳ್ಳಿಯಲ್ಲಿ ‘ತಹಶೀಲ್ದಾರ್ ನಡೆ ಹಳ್ಳಿ ಕಡೆ’ ಕಾರ್ಯಕ್ರಮ
ಈ ವಿಚಾರವಾಗಿ ಡಿಜಿಯವರನ್ನು ಕರೆದು ಮಾತನಾಡುತ್ತೇನೆ. ಇವತ್ತು ಈ ವಿಚಾರದಲ್ಲಿ ಕಾನೂನನ್ನು ಸುವ್ಯವಸ್ಥೆಯನ್ನು ಯಾರೂ ಕೈಗೊಳ್ಳದಂತೆ ಎಲ್ಲಾ ಎಸ್ಪಿಗಳಿಗೆ ಸೂಚನೆ ನೀಡುವಂತೆ ತಿಳಿಸಿದ್ದೇನೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ಧಾಕ್ಷ್ಯಣ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದೇನೆ ಎಂದರು.
BIG NEWS: ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ಧರಾಮಯ್ಯಗೆ ಪಶ್ಚಾತಾಪವಾಗಿದೆ – ಬಾಳೆಹೊನ್ನೂರು ಶ್ರೀ
ಯಾರೂ ಇನ್ನೊಬ್ಬರ ಮನಸ್ಥಿತಿಯನ್ನು ಪ್ರಚೋಧನೆ ಕೊಡುವಂತೆ ಹೇಳಿಕೆ ನೀಡಬಾರದು. ಈ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರಿಗೆ ಹೆಚ್ಚಿನ ಭದ್ರತೆಯನ್ನು ನೀಡೋದಕ್ಕೂ ಡಿಜಿಯವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.