ಕೋಲಾರ: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದೇ ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮುಂಬರುವಂತ ವಿಧಾನಸಭಾ ಚುನಾವಣೆಗೆ ( Karnataka Assembly Election -2023 ) ಮತ್ತೆ ಕ್ಷೇತ್ರ ಬದಲಿಸೋ ಹಾದಿ ಹಿಡಿರುವಂತ ಅವರು, ಈಗ ಕೋಲಾರದಿಂದ ಬಹುತೇಕ ಸ್ಪರ್ಧಿಸೋದು ಫಿಕ್ಸ್ ಆದಂತೆ ಆಗಿದೆ. ಹೀಗಾಗಿಯೇ ನಾಮಪತ್ರ ಸಲ್ಲಿಸೋದಕ್ಕೆ ಮತ್ತೆ ಬರುತ್ತೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ ಎನ್ನಲಾಗಿದೆ.
ಇಂದು ಕೋಲಾರಕ್ಕೆ ವಿಶೇಷ ಬಸ್ ನಲ್ಲಿ ಪ್ರವಾಸ ಕೈಗೊಂಡಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ಕೋಲಾರಮ್ಮನ ದರ್ಶನ ಪಡೆದು, ಅಲ್ಲಿಂದ ಚರ್ಚ್ ಗೂ ತೆರಳಿದರು. ಈ ಬಳಿಕ ಮಾತನಾಡಿದಂತ ಅವರು, ಕೋಲಾರಕ್ಕೆ ಬರುವಂತೆ ರಮೇಶ್ ಕುಮಾರ್ ಹಾಗೂ ಶಾಸಕರು ಸ್ವಾಗತಿಸುತ್ತಿದ್ದಾರೆ. ಹೀಗಾಗಿಯೇ ಭೇಟಿ ವೇಳೆ ಅದ್ದೂರಿಯಾಗಿ ಸ್ವಾಗತ ಸಿಕ್ಕಿದೆ ಎಂದರು.
ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಒತ್ತಡ ಬರುತ್ತಿದೆ. ನಾನು ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ಆದ್ರೇ ವರುಣಾ, ಬಾದಾಮಿಯಿಂದಲೂ ಸ್ಪರ್ಧೆಸುವಂತೆ ಹೇಳುತ್ತಿದ್ದಾರೆ. ಈ ನಡುವೆಯೂ ಅದ್ದೂರಿಯಾಗಿ ಸ್ವಾಗತಿದಿಂದ ಕೋಲಾರದ ಜನತೆಗೆ ಧನ್ಯವಾದ, ಜಿಲ್ಲೆಯ ಜನತೆಗೆ ಅಬಾರಿ ಎಂದು ಹೇಳಿದರು.
BIG NEWS: 11,000 ಸಿಬ್ಬಂದಿಯನ್ನು ಕಡಿತಗೊಳಿಸಿದ ಫೇಸ್ ಬುಕ್ ಒಡೆತನದ ಮೆಟಾ | Facebook cut staff
ನಾನು ಸಿಎಂ ಆಗಿ ಮಾಡಿದಂತ ಆಡಳಿತವನ್ನು ನೀವು ನೋಡಿದ್ದೀರಿ. ಸಂವಿಧಾನದ ಅಡಿಯಲ್ಲಿ ಯಾವುದೇ ಧರ್ಮದ ಆಧಾರದ ಮೇಲೆ ಕೆಲಸ ಮಾಡದೇ, ಧರ್ಮಾತೀತವಾಗಿ ಕೆಲಸ ಮಾಡಿದ್ದೇನೆ. ಆ ಹಿನ್ನಲೆಯಲ್ಲಿಯೇ ನಾನು ನಾಮಪತ್ರ ಸಲ್ಲಿಸೋದಕ್ಕೆ ಮತ್ತೆ ಕೋಲಾರಕ್ಕೆ ಬರುತ್ತೇನೆ ಎಂಬುದಾಗಿ ಹೇಳುವ ಮೂಲಕ ಕೋಲಾರದಿಂದ ಸ್ಪರ್ಧಿಸೋ ಇಂಗಿತವನ್ನು ಹೊರ ಹಾಕಿದರು.