ಉತ್ತರಪ್ರದೇಶ : ಉತ್ತರ ಪ್ರದೇಶದಲ್ಲಿ ಭೀಕರವಾದ ಕೊಲೆ ನಡೆದಿದ್ದು ಪ್ರೀತಿಸಿ ಮದುವೆಯಾಗಿದ್ದ ಪತಿಯೊಬ್ಬ ನನ್ನ ಎದುರಲ್ಲಿ ಬೇರೆಯವರೊಂದಿಗೆ ಮಾತಾಡುತ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಬಳಿಕ ತನ್ನ ಅತ್ತೆಗೆ ಕರೆ ಮಾಡಿ ಪತ್ನಿಯನ್ನು ಕೊಂಡಿದ್ದೇನೆ ಎಂದು ಹೇಳಿರುವ ಘಟನೆ ಉತ್ತರಪ್ರದೇಶದ ಬಾಗ್ಪತ್ ನಲ್ಲಿ ನಡೆದಿದೆ.ಆರೋಪಿ ಅಪರಾಧ ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ತನಿಖೆ ಮುಂದುವರೆಸಿದ್ದಾರೆ.
ಹೌದು ಪತಿ ಪ್ರಶಾಂತ್ ಪತ್ನಿ ನೇಹಾಳನ್ನು ಕೊಲೆ ಮಾಡಿ ಬಳಿಕ ನೇಹಾಳ ತಾಯಿಗೆ ಕರೆ ಮಾಡಿ ನನ್ನ ಎದುರಲ್ಲೇ ಬೇರೆಯವರ ಜೊತೆ ಫೋನಿನಲ್ಲಿ ಮಾತಾಡುತ್ತಾಳೆ. ಹಾಗಾಗಿ ಅವಳನ್ನು ಕೊಂದಿದ್ದೇನೆ ಎಂದು ಕರೆ ಮಾಡಿ ತಿಳಿಸಿದ್ದಾನೆ. ಆರೋಪಿ ಪ್ರಶಾಂತ್ ಆಟೋ ಚಾಲಕನಾಗಿದ್ದು ಕಳೆದ ಎಂಟು ವರ್ಷಗಳ ಹಿಂದೆ ಪ್ರಶಾಂತ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಇಬ್ಬರಿಗೆ ನಾಲ್ಕು ವರ್ಷದ ಮಗ ಸಹ ಇದ್ದಾನೆ.
ಆರೋಪಿಯು ಸುಮಾರು 15 ನಿಮಿಷಗಳ ಕಾಲ ಶವದ ಬಳಿ ಓಡಾಡಿ ಬಳಿಕ ಅತ್ತೆಗೆ ಕರೆ ಮಾಡಿದ್ದಾನೆ. ನಾನು ಆಕೆಯನ್ನು ಕೊಂದು ಎಸೆದಿದ್ದೇನೆ, ಈಗ ನಾನು ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.ಮೂಲತಃ ಸಹರಾನ್ಪುರದವರಾದ ನೇಹಾ ಈಗ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೊದಲು ಬ್ಯೂಟಿಪಾರ್ಲರ್ ನಡೆಸುತ್ತಿದ್ದರು. ಕುಟುಂಬವು ಪ್ರಶಾಂತ್ ಅವರ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಪ್ರಶಾಂತ್ ಮೊದಲ ಆಕೆಯ ಕೈಗಳ ಮೇಲೆ ಹಲ್ಲೆ ನಡೆಸಿದ್ದಾನೆ, ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಆಕೆಯ ಬೆರಳುಗಳನ್ನು ಕತ್ತರಿಸಿದ್ದಾನೆ. ನಂತರ ಗಂಟಲು ಸೀಳಿದ್ದಾನೆ. ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಪ್ರಶಾಂತ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದ. ನಿರಂತರ ಜಗಳದಿಂದ ಬೇಸತ್ತ ನೇಹಾ ಇತ್ತೀಚೆಗೆ ತನ್ನ ತಾಯಿ ರಂಜಿತಾ ಅವರೊಂದಿಗೆ ಅದೇ ಪ್ರದೇಶದಲ್ಲಿ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
उत्तर प्रदेश के बागपत में रिक्शा ड्राइवर प्रशांत ने पत्नी नेहा की चाकू से गला काटकर निर्मम हत्या कर दी। प्रशांत ने पुलिस को बताया– "मैंने पत्नी को किसी और युवक से कॉल पर बातें करते सुना था। मैंने पहले ही कह दिया था कि मेरे अलावा किसी और से बात मत करना" pic.twitter.com/MQdt3yx9KH
— Guru अज्ञानी (@Guru_Agyani) May 7, 2025