ಕೆಎನ್ಎನ್ಡಿಜಿಟಲ್ ಡೆಸ್ಕ್ : ಶ್ರದ್ಧಾ ಕೊಲೆ ಪ್ರಕರಣ ಇಡೀ ದೇಶವನ್ನ ಬೆಚ್ಚಿ ಬೀಳಿಸಿದ ಕೇಲವೇ ದಿನಗಳ ನಂತ್ರ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಈ ಕೊಲೆಯಿಂದ ದೆಹಲಿ ಮತ್ತೊಮ್ಮೆ ಆಘಾತಕ್ಕೊಳಗಾಗಿದೆ.
ದೆಹಲಿಯ ಪಾಲಂನಲ್ಲಿ ಕೇಶವ್ ತನ್ನ ತಂದೆ, ತಾಯಿ, ಅಜ್ಜಿ ಮತ್ತು ಸಹೋದರಿಯನ್ನ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಕೇಶವ್ ಡ್ರಗ್ಸ್ ವ್ಯಸನಿಯಾಗಿದ್ದು, ಬುಧವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೇಶವ್, ತನ್ನ ಅಜ್ಜಿಯ ಬಳಿ ಹಣಕ್ಕಾಗಿ ಮೊರೆಯಟ್ಟಿದ್ದಾನೆ. ಆಕೆ ಹಣ ನೀಡಲು ನಿರಾಕರಿಸಿದಾಗ ಅಜ್ಜಿಯನ್ನ ಕೊಂದಿದ್ದಾನೆ. ನಂತ್ರ ಆತ ತನ್ನ ತಂದೆ, ತಾಯಿ ಮತ್ತು ಸಹೋದರಿಯನ್ನ ಕೂಡ ಕೊಚ್ಚಿ ಕೊಂದಿದ್ದಾನೆ. ಇನ್ನು ತಂದೆಯ ಮೇಲೆ ಯುವನಿಗೆ ಎಷ್ಟು ಕೋಪವಿತ್ತೆಂದ್ರೆ ಆತನನ್ನ ಚಾಕುವಿನಿಂದ ಸುಮಾರು 18-20 ಬಾರಿ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಕೇಶವ್ ಬುಧವಾರ ತಡವಾಗಿ ಎಚ್ಚರಗೊಂಡಿದ್ದೇ, ಆತನ ತಂದೆ ಬೈಯ್ಯಲು ಶುರು ಮಾಡಿದ್ದು, ಕೆಲಸವಿಲ್ಲದ ನಿಷ್ಪ್ರಯೋಜಕರು ಅಂತಾ ನಿಂದಿಸಲು ಶುರ ಮಾಡಿದ್ದಾರೆ. ಇದರ ನಂತ್ರ ಕೇಶವ್ ಮನೆಯಿಂದ ಹೊರಗೆ ಓಡಿ ಹೋಗಿದ್ದಾನೆ.
“ವಿಚಾರಣೆಯ ಸಮಯದಲ್ಲಿಯೂ, ಕೇಶವ್ ತುಂಬಾ ಒರಟಾಗಿ ಉತ್ತರಿಸುತ್ತಿದ್ದಾನೆ. ಅವನು ತನ್ನ ಇಡೀ ಕುಟುಂಬವನ್ನು ಕೊಂದಿದ್ರೂ ಒಂಚೂರು ಪಶ್ಚಾತ್ತಾಪ ಪಡ್ತಿಲ್ಲ. ತನಿಖೆಯಲ್ಲಿ ತನ್ನ ಕುಟುಂಬವು ತಪ್ಪು ಮಾಡಿದೆ ಎಂದು ನಿರಂತರವಾಗಿ ಹೇಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ಒಂದು ವರ್ಷದ ಹಿಂದೆ ತನ್ನ ಗೆಳತಿಯೊಂದಿಗೆ ಬೇರ್ಪಟ್ಟಿದ್ದು, ನಂತ್ರ ತನ್ನ ಭಾವನೆಗಳು ಘಾಸಿಗೊಂಡವು. ಆ ಸಮಯದಲ್ಲಿಯೂ ಕುಟುಂಬದ ಯಾವುದೇ ಸದಸ್ಯರು ನನ್ನನ್ನ ಬೆಂಬಲಿಸಲಿಲ್ಲ. ಯುವತಿಯ ಹೊರತಾಗಿಯೂ, ನನ್ನ ತಂದೆಯು ನನ್ನನ್ನ ನಿಂದಿಸಿದ್ದ” ಎಂದು ಕೇಶವ್ ಹೇಳಿದ್ದಾನೆ.
BREAKING NEWS: ಕರ್ನಾಟಕಕ್ಕೆ 1,915 ಕೋಟಿ GST ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಹಿಂದೂ ದೇವಾಲಯಗಳ ಮೇಲೆ ಉಗ್ರರ ಟಾರ್ಗೆಟ್ : ಮಂತ್ರಾಲಯ ಶ್ರೀಗಳು ಹೇಳಿದ್ದೇನು..?