ಚಿತ್ರದುರ್ಗ : ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚತ್ತಿದ್ದು, ಹಾಸನ ಜಿಲ್ಲೆಯ ಒಂದರಲ್ಲೆ ಕಳೆದ 46 ದಿನಗಳಲ್ಲಿ 38 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ.ಇದೀಗ ಚಿತ್ರದುರ್ಗದಲ್ಲಿ ಕೂಡ ಹೃದಯಾಘಾತದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಚಿತ್ರದುರ್ಗದಲ್ಲಿ ಹೃದಯಾಘಾತದಿಂದ ಕಂಪ್ಲೇಶ್ (34) ಎಂಬುವರು ಸಾವನಪ್ಪಿದ್ದಾರೆ. ಚಿತ್ರದುರ್ಗದ ಸೊಲ್ಲಾಪುರ ನಾಯಕರಹಟ್ಟಿಯಲ್ಲಿ ಈ ಒಂದು ಘಟನೆ ನಡೆದಿದ್ದು, ರಾತ್ರಿ ಮಲಗಿದ್ದಾಗ ಕಂಪ್ಲೇಶ್ ಅವರಿಗೆ ಎದೆ ನೋವು ಕಾಣಿಸಿತ್ತು. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕಂಪ್ಲೇಶ್ ಸಾವನಪ್ಪಿದ್ದಾರೆ.