ಉತ್ತರಪ್ರದೇಶ : ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರ ಹಾಗೂ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದೀಗ ಉತ್ತರ ಪ್ರದೇಶದ ನೋಯ್ಡಾದಲ್ಲಿ ಶಿಕ್ಷಕಿಯರ ಶೌಚಾಲಯದಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿದ್ದ ಶಾಲೆಯ ನಿರ್ದೇಶಕನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಶಿಕ್ಷಕಿಯರ ವಾಶ್ರೂಮನ್ ಬಲ್ಬ್ ಸಾಕೆಟ್ನಲ್ಲಿ ಸ್ಪೈ ಕ್ಯಾಮರಾವನ್ನು ಶಾಲಾ ನಿರ್ದೇಶಕನೊಬ್ಬ ಇಟ್ಟಿದ್ದ ಎನ್ನಲಾಗಿದೆ. ಆತ ತನ್ನ ಕಂಪ್ಯೂಟರ್ ಹಾಗೂ ಮೊಬೈಲ್ ಮೂಲಕ ವಾಶ್ರೂಂನ ವಿಡಿಯೋವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ. ಈ ಕುರಿತು ಶಿಕ್ಷಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಶಿಕ್ಷಕಿಯ ದೂರಿನ ಮೇರೆಗೆ ಆತನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಘಟನೆ ಹಿನ್ನೆಲೆ?
ಡಿಸೆಂಬರ್ 10 ರಂದು ನೋಯ್ಡಾದ ಸೆಕ್ಟರ್ 70 ರ ಪ್ಲೇ ಸ್ಕೂಲ್ ಆದ ಲರ್ನ್ ವಿತ್ ಫನ್‌ನಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿಯೊಬ್ಬರು ವಾಶ್‌ರೂಮ್‌ನ ಬಲ್ಬ್ ಹೋಲ್ಡರ್‌ನಲ್ಲಿ ಮಸುಕಾದ ಬೆಳಕಿರುವುದನ್ನು ಗಮನಿಸಿದರು. ಅದು ಅನುಮಾನವನ್ನು ಹುಟ್ಟುಹಾಕಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಸ್ಪೈ ಕ್ಯಾಮರಾ ಇರುವುದು ಕಂಡುಬಂದಿತ್ತು.
ಕೂಡಲೇ ಶಾಲೆಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಸಾಧನ ಇರುವುದನ್ನು ಖಚಿತಪಡಿಸಿದ್ದಾರೆ.ಈ ಕುರಿತು ಶಿಕ್ಷಕಿಯು ಶಾಲೆಯ ನಿರ್ದೇಶಕ ನವನಿಷ್ ಸಹಾಯ್ ಮತ್ತು ಶಾಲೆಯ ಸಂಯೋಜಕರಾದ ಪಾರುಲ್ ಅವರಿಗೆ ವಿಷಯ ತಿಳಿಸಿದ್ದಾರೆ. ಅವರು ಆರೋಪಗಳನ್ನು ನಿರಾಕರಿಸಿದರು.
ಬಳಿಕ ಶಿಕ್ಷಕಿಯ ದೂರಿನ ಮೇರೆಗೆ ನೋಯ್ಡಾದ ಕೇಂದ್ರ ಉಪ ಪೊಲೀಸ್ ಆಯುಕ್ತ ಶಕ್ತಿ ಮೋಹನ್ ಅವಸ್ತಿ ಅವರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೆಕಾರ್ಡ್ ಮಾಡದೆಯೇ ಲೈವ್ ಸ್ಟ್ರೀಮಿಂಗ್ ಮಾಡುವ ಸಾಮರ್ಥ್ಯವನ್ನು ಅದು ಹೊಂದಿದೆ. ನಂತರ ಡೈರೆಕ್ಟರ್ ನವೀಶ್ ಸಹಾಯ್ನನ್ನು ಪೊಲೀಸರು ಬಂಧಿಸಿದ್ದಾರೆ.