ರಾಯಚೂರು : ಇತ್ತೀಚಿಗೆ ಗದಗದಲ್ಲಿ ಅಡಿಕೆಗೆ ಕೆಮಿಕಲ್ ಕಲರ್ ಹಾಕಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿತ್ತು. ಇದೀಗ ರಾಯಚೂರಿನಲ್ಲಿ ಮತ್ತೊಂದು ಗ್ಯಾಂಗ್ ಪತ್ತೆಯಾಗಿದ್ದು, ಆಹಾರ ಪದಾರ್ಥಕ್ಕೂ ಕೂಡ ಇದೀಗ ಕೆಮಿಕಲ್ ಕಲಬೆರಿಕೆ ಮಾಡಿದ ಪತ್ತೆಯಾಗಿದೆ.
ಹೌದು ಕರ್ನಾಟಕದಲ್ಲಿ ಕೆಲವರಿಗೆ ಕಳ್ಳರದ್ದೇ ಸಾಮ್ರಾಜ್ಯವಾಗಿಬಿಟ್ಟಿದೆ. ಆಹಾರ ಪದಾರ್ಥಕ್ಕೂ ಕೂಡ ಕಲಬೆರೆಕೆ ಮಾಡಿದ್ದು ಪತ್ತೆಯಾಗಿದೆ. ಬೆಳೆ, ಹೆಸರು ಕಾಳಿಗೆ ಕಲರ್ ಕಲರ್ ಬಣ್ಣ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಹಳದಿ ಕೆಂಪು ಬಣ್ಣ ಮಿಶ್ರಣ ಮಾಡಿ ಮಾರಾಟ ಮಾರಾಟ ಮಾಡುತ್ತಿದ್ದಾರೆ. ರಾಯಚೂರು ನಗರದಲ್ಲಿ ಈ ಒಂದು ಕಲಬೆರಿಕೆ ಬಯಲಾಗಿದೆ ಬೆಳೆಕಾಳು ಮತ್ತು ಮಸಾಲೆ ಪಲಾವ್ ಎಲೆಗಳು ಅಂತ ನೀಲಿಗಿರಿ ಎಲೆಗಳನ್ನು ಮಾಡುತ್ತಿದ್ದಾರೆ ಚಕ್ಕೆ ಲವಂಗ ಅಂತ ಹೇಳಿ ಮರದ ಹೊಟ್ಟು ಮಿಕ್ಸ್ ಮಾಡುತ್ತಿದ್ದಾರೆ ಕಾಡು ಮನಸಿಗೆ ಪಪ್ಪಾಯಿ ಬೀಜ ಸೇರಿಸಿ ಮಹಾ ದಂಧೆ ನಡೆಸುತ್ತಿದ್ದಾರೆ ಜನರ ಜೀವನ ಕಥೆ ಚೆಲ್ಲಾಟಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, ಬಿರಿಯಾನಿ ಎಲೆ, ದನಿಯಾ ಕಾಳು, ಕಾಳು ಮೆಣಸಿಗೆ ಚಿಕನ್ ಸಾಂಬಾರ್ ಗೆ ಬಳಸುವ ಮಸಾಲೆ ಪದಾರ್ಥಗಳು ಕೂಡ ನಕಲು ಆಗಿದ್ದು, ದಾಳಿಯ ವೇಳೆ ಒಟ್ಟು 846 ಕೆಜಿ ವಿವಿಧ ನಕಲಿ ಪಧಾರ್ಥಗಳು ಜಪ್ತಿ ಮಾಡಲಾಗಿದೆ. 367 ಅರಿಶಿಣ, ಕಡಲೆಕಾಳು, 150 ಕೆಜಿ ಕೆಂಪು ಕಡಲೇ, 16 ಕೆಜಿ ಕೆಂಪು ಕೊಬ್ಬರಿ ಆರೂವರೆ ಕೆಜಿ ನೀಲಗಿರಿ ಎಲೆ 43 ಕೆಜಿ ಹಾಗೂ 500 ಗ್ರಾಮ ಹಳದಿ ಹಾಗೂ ಕೆಂಪು ಬಣ್ಣದ ಕೆಮಿಕಲ್ ಅನ್ನು ವಶಕ್ಕೆ ಪಡೆಯಲಾಗಿದೆ.








