ಚಿತ್ರದುರ್ಗ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಎದೆಯಲ್ಲಿ ಉರಿ ಆಗುತ್ತಿದೆ ಎಂದಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.
ಎದೆ ಭಾಗದಲ್ಲಿ ಉರಿಯುತ್ತಿದೆ ಎಂದು ಬಾಲಕ ವೈಷ್ಣವ್ (4) ಪೋಷಕರಿಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆಗೆ ಸಾಗಿಸೋವಾಗ ಮಾರ್ಗಮಧ್ಯೆ ವೈಷ್ಣವ್ ಕೊನೆಯುಸೀರು ಎಳೆದಿದ್ದಾನೆ. ವೈದ್ಯರ ಮಾಹಿತಿಯ ಪ್ರಕಾರ ವೈಷ್ಣವ್ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.








