ಶಿವಮೊಗ್ಗ: ನಾಳೆ ಸೊರಬ ತಾಲೂಕಿನ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ( Ulavi Primary Health Center ) ಬೃಹತ್ ರಕ್ತದಾನ ಶಿಬಿರ ( Blood donation camp ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ಕೋರಿದೆ.
ಈ ಬಗ್ಗೆ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ ರಕ್ತನಿಧಿ ಘಟಕ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ದೂಗೂರು, ಉಳವಿ, ನಿಸಾರಾಣಿ, ಹೆಗ್ಗೋಡು ಗ್ರಾಮಪಂಚಾಯ್ತಿ, ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ( Lions Club Ulavi ) ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ.
ದಿನಾಂಕ 12-12-2022ನೇ ಸೋಮವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದೆ.
ಯಾರು ರಕ್ತ ದಾನ ಮಾಡಬಹುದು?
ಈ ರಕ್ತದಾನ ಶಿಬಿರದಲ್ಲಿ ಕನಿಷ್ಠ 45 ಕೆಜಿ ತೂಕ ಇರುವಂತ ಆರೋಗ್ಯವಂತರು ಭಾಗವಹಿಸಿ ರಕ್ತದಾನ ಮಾಡಬಹುದಾಗಿದೆ. 18 ರಿಂದ 60 ವರ್ಷದೊಳಗಿನ ಪುರುಷ, ಮಹಿಳೆಯರು ರಕ್ತದಾನ ಮಾಡಲು ಅರ್ಹರಾಗಿರುತ್ತಾರೆ. ಅಲ್ಲದೇ ಕನಿಷ್ಠ 12.5 ಗ್ರಾಂ ಹಿಮೋಗ್ಲೋಬಿನ್ ಪ್ರಮಾಣ ರಕ್ತದಲ್ಲಿ ಹೊಂದಿರುವವರು ರಕ್ತದಾನ ಮಾಡಬುಹುದು.
ಆದ್ರೇ ಒಂದು ವರ್ಷದಿಂದ ಈಚೆಗೆ ಮಲೇರಿಯಾ, ಟೈಪೈಡ್, ಜಾಂಡೀಸ್ ಆದವರು, ಶಸ್ತ್ರಚಿಕಿತ್ಸೆಗೆ ಒಳಗಾದವರು, ಗರ್ಭಿಣಿ ಸ್ತ್ರೀಯರು, ಹಾಲುಣಿಸುವ ತಾಯಂದಿರು, ಋತುಸ್ರಾವದಲ್ಲಿರುವಂತ ಸ್ತ್ರೀಯರು ರಕ್ತದಾನ ಮಾಡುವಂತಿಲ್ಲ.
ರಕ್ತದಾನ ಮಾಡಿ, ಅಮೂಲ್ಯ ಜೀವ ಉಳಿಸೋ ಮೂಲಕ ರಕ್ತದಾನ ಶ್ರೇಷ್ಟದಾನವೆನ್ನುವಂತೆ ನೀವು ನಾಳಿನ ರಕ್ತದಾನ ಶಿಬಿರದಲ್ಲಿ ಭಾಗವಹಿಸೋದು ಮರೆಯಬೇಡಿ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ವೈದ್ಯಾಧಿಕಾರಿಗಳು ಡಾ.ಪವಾರ್-6360112009, ಚಂದ್ರನಾಯ್ಕ -9916711001, ಜೀವನ್ ಹೆಚ್ ಎಸ್-6363606114 ಹಾಗೂ ಪ್ರವೀಣ್ ಕುಮಾರ್-9844466222.
ವರದಿ: ವಸಂತ ಬಿ ಈಶ್ವರಗೆರೆ