ಶಿವಮೊಗ್ಗ : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗಾಜನೂರು ಮೂಲ ಸ್ಥಾವರದಲ್ಲಿ ವಿದ್ಯುತ್ ಪೂರೈಕೆ ನಿಲುಗಡೆ ಇರುವುದರಿಂದ ದಿ: 18/11/2022 ಮತ್ತು ದಿ: 19/11/2022 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.
BIG NEWS: ಮೋದಿ ನಿಂತು ಮಾತನಾಡೋ ಕೆಂಪು ಕೋಟೆ ಕಟ್ಟಿದ್ದೇ ಮುಸ್ಲೀಮರು – JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ
ನ.19ರಂದು ಕೊನಗವಳ್ಳಿಯಲ್ಲಿ ವಿದ್ಯುತ್ ಅದಾಲತ್
ನವೆಂಬರ್ 19 ರಂದು ಬೆಳಿಗ್ಗೆ 10.30 ರಿಂದ ಹಾರ್ನಳ್ಳಿ ಶಾಖಾ ವ್ಯಾಪ್ತಿಯ ಕೊನಗವಳ್ಳಿ ಗ್ರಾ.ಪಂ, ಕೊನಗವಳ್ಳಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ವಿದ್ಯುತ್ ಅದಾಲತ್ ನಡೆಸಲಾಗುತ್ತಿದ್ದು, ಕೊನಗವಳ್ಳಿ ಗ್ರಾಮದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
BIG NEWS: ಈ ತಿಂಗಳಿನಿಂದಲೇ ರಾಜ್ಯಾಧ್ಯಂತ 438 ನಮ್ಮ ಕ್ಲಿನಿಕ್ ಕಾರ್ಯಾರಂಭ – ಸಚಿವ ಸುಧಾಕರ್ | Namma Clinic
ನವೆಂಬರ್ 19 ರಂದು ಬೆಳಿಗ್ಗೆ 11 ಗಂಟೆಯಿಂದ ಶಿವಮೊಗ್ಗ ತಾಲ್ಲೂಕು ಬಿದರೆ ಗ್ರಾಮದ ಗ್ರಾ.ಪಂ ಕಚೇರಿಯಲ್ಲಿ ಮೆಸ್ಕಾಂ ಗ್ರಾಹಕರ ಕುಂದು ಕೊರತೆ ನೀಗಿಸುವ ಸಲುವಾಗಿ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
BIG NEWS: ರಾಜ್ಯದ ‘ಎಲ್ಲಾ ಜಿಲ್ಲಾಸ್ಪತ್ರೆ’ಯಲ್ಲಿ ‘ಸಹಾಯವಾಣೆ’ ಆರಂಭ: ಹಗಲು-ರಾತ್ರಿ ಸೇವೆ – ಸಚಿವ ಸುಧಾಕರ್
ಬಿದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಹಕರು ತಮ್ಮ ಕುಂದು ಕೊರತೆಗಳಿದ್ದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಹರಿಸಿಕೊಳ್ಳಬಹುದು ಎಂದು ಮೆಸ್ಕಾಂ ಗ್ರಾಮಾಂತರ ಉಪವಿಭಾಗದಿಂದ ಮಾಹಿತಿ ನೀಡಿದೆ.