ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ( Shivamogga DCC Bank )ನಲ್ಲಿ ಖಾಲಿ ಇರುವ ಕಿರಿಯ ಸಹಾಯಕರು/ನಗದು ಗುಮಾಸ್ತರು/ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ದಿ: 12/11/2022 ಹಾಗೂ ದಿ: 13/11/2022 ರಂದು ನಡೆಸಲಾಗುತ್ತಿದೆ.
‘ಯುಪಿಐ ವಹಿವಾಟಿ’ನಲ್ಲಿ ದಾಖಲೆ ; ಅಕ್ಟೋಬರ್’ನಲ್ಲಿ ಬರೋಬ್ಬರಿ ’12 ಲಕ್ಷ ಕೋಟಿ’ ಟ್ರಾನ್ಸಕ್ಷನ್
ಈ ಕುರಿತು ಪ್ರವೇಶ ಪತ್ರವನ್ನು ಕಳುಹಿಸಲಾಗಿದ್ದು, ಪ್ರವೇಶ ಪತ್ರ ತಲುಪದಿದ್ದ ಅಭ್ಯರ್ಥಿಗಳು ಅರ್ಜಿಯ ಸ್ವೀಕೃತಿ ಪತ್ರ, ಕೋರಿಕೆ ಪತ್ರ, ಮೂಲ ಆಧಾರ ಕಾರ್ಡ್ ಹಾಗೂ ಜೆರಾಕ್ಸ್ ಪ್ರತಿ, 2 ಭಾವಚಿತ್ರದೊಂದಿಗೆ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ದಿ: 10/11/2022 ರಂದು ಸಂಪರ್ಕಿಸಿದ್ದಲ್ಲಿ ಡ್ಯೂಪ್ಲಿಕೇಟ್ ಪ್ರವೇಶ ಪತ್ರವನ್ನು ನೀಡಲಾಗುವುದು ಹಾಗೂ ಅರ್ಜಿ ತಿರಸ್ಕøತಗೊಂಡ ಎಲ್ಲಾ ಹುದ್ದೆಗಳ ಅರ್ಜಿದಾರರ ವಿವರವನ್ನು ಬ್ಯಾಂಕಿನ ಪ್ರಧಾನ ಕಚೇರಿಯ ನೋಟಿಸ್ ಬೋರ್ಡ್ನಲ್ಲಿ ಹಾಗೂ ಬ್ಯಾಂಕಿನ ವೆಬ್ಸೈಟ್ www.shimogadccbank.com ರಲ್ಲಿ ಪ್ರಕಟಿಸಲಾಗಿದೆ ಎಂದು ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ:12/11/2022 ರಂದು ವಾಹನ ಚಾಲರ ಹುದ್ದೆಗಾಗಿ ಮಧ್ಯಾಹ್ನ 02.00 ರಿಂದ 3.30 ರವರೆಗೆ ಆಚಾರ್ಯ ತುಳಸಿ ಕಾಲೇಜ್ ಆಫ್ ಕಾಮರ್ಸ್, ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣ ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ ಹಾಗೂ ದಿ: 13/11/2022 ರಂದು ಅಟೆಂಡರ್ ಹುದ್ದೆಗಾಗಿ ಬೆ.10.30 ರಿಂದ ಮ. 12.00ರವರೆಗೆ ಮತ್ತು ಕಿರಿಯ ಸಹಾಯಕರು/ ನಗದು ಗುಮಾಸ್ತರು/ ಕ್ಷೇತ್ರಾಧಿಕಾರಿಗಳ ಹುದ್ದೆಗಳಿಗಾಗಿ ಮ.2.00 ರಿಂದ ಸಂ. 5.00ರವರೆಗೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣ, ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜು, ಕಸ್ತೂರಬಾ ಪ್ರೌಢಶಾಲೆ ಆವರಣ ಹಾಗೂ ಡಿ.ವಿ.ಎಸ್. ಕಾಲೇಜು ಆವರಣ ಶಿವಮೊಗ್ಗ ಇಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222396 ನ್ನು ಸಂಪರ್ಕಿಸುವುದು.