ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕಿನಲ್ಲಿ ರೈತರು ಮೆಕ್ಕೆಜೋಳಕ್ಕೆ ಮೇಲು ಗೊಬ್ಬರವಾಗಿ ಯೂರಿಯಾ ಗೊಬ್ಬರವನ್ನು ಬಳಕೆ ಮಾಡುತ್ತಿದ್ದು, ಮಾರಾಟಗಾರರು ರೈತರಿಗೆ ಎಂ.ಆರ್.ಪಿ ದರದಲ್ಲಿಯೇ ರಸಗೊಬ್ಬರ(ಯೂರಿಯಾ) ಮಾರಾಟ ಮಾಡಬೇಕು. ಇಲ್ಲವಾದಲ್ಲಿ ಅಂತಹ ರಸಗೊಬ್ಬರ ಮಾರಾಟ ಅಂಗಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
‘ಶಿವಮೊಗ್ಗ ಜನತೆ’ಗೆ ಗುಡ್ ನ್ಯೂಸ್: ‘ಡಿಸೆಂಬರ್’ನಲ್ಲಿ ‘ವಿಮಾನ ನಿಲ್ದಾಣ’ ಲೋಕಾರ್ಪಣೆ
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಪರಿಕರ ಮಾರಾಟಗಾರರು ರಸಗೊಬ್ಬರಗಳ ದರಗಳನ್ನು ಮಾರ್ಗಸೂಚಿಯನ್ವಯ ಪ್ರದರ್ಶನ ಮಾಡಿ ನಿಗದಿತ ನಮೂನೆಯಲ್ಲಿ ಬಿಲ್ಗಳನ್ನು ನೀಡಿ ಮಾರಾಟ ಮಾಡಲು ಸೂಚಿಸಲಾಗಿದೆ. ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವುದು ಅಥವಾ ಯೂರಿಯಾ ಗೊಬ್ಬರ ಇಲ್ಲವೆಂದು ಕೃತಕ ಅಭಾವ ಸೃಷ್ಟಿಸುವುದು ಕಂಡುಬಂದಲ್ಲಿ ಅಂತಹ ಕೃಷಿ ಪರಿಕರ ಮಾರಾಟ ಮಳಿಗೆಗಳ ಪರವಾನಿಗೆಯನ್ನು ರದ್ದು ಮಾಡಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
BREAKING: ಭಾರೀ ಮಳೆ ಹಿನ್ನಲೆ: ನಾಳೆ ಶಿವಮೊಗ್ಗ ಜಿಲ್ಲೆಯ ‘ಸಾಗರ’ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ