ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ 8ನೇ ವಾರ್ಡ್ ಶ್ರೀನಗರದಲ್ಲಿ 46ನೇ ವರ್ಷದ ಗಣೇಶ ವಿಸರ್ಜನೆ ಗುರುವಾರ ಅದ್ದೂರಿಯಾಗಿ ನಡೆಯಿತು. ಅದರಲ್ಲೂ ಗಣೇಶ ವಿಸರ್ಜನೆಯ ವೇಳೆ ನಡೆದಂತ ಬೆಂಕಿಯಾಟ ಗಮನಸೆಳೆಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಗಣೇಶೋತ್ಸವದ ಪ್ರಯುಕ್ತ ಗಣಹೋಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆಯನ್ನ ಶ್ರೀನಗರ ಯುವಜನ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿ ಸಮಿತಿಯವರು ನಡೆಸಿಕೊಡಲಾಯಿತು.
ಗಮನ ಸೆಳೆದ ಬೆಂಕಿಯಾಟ ಪ್ರದರ್ಶನ
ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟ ಪ್ರದರ್ಶನ ಕಳೆದ 2 ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಗಣೋಶೋತ್ಸವದ ಸಂದರ್ಭದಲ್ಲಿ ಅದ್ದೂರಿಯಾಗಿ ಬೆಂಕಿಯಾಟ ಪ್ರದರ್ಶನವನ್ನ ಸಾರ್ವಜನಿಕರು ಕಣ್ತುಂಬಿಕೊಂಡರು.
BIGG NEWS : ಉದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್ ; ಶೀಘ್ರ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ |DA Hike Date
ನಗರದ ಹೃದಯಭಾಗ ಸಾಗರ ಹೋಟೆಲ್ ಸರ್ಕಲ್ ಹಾಗೂ ಪೋಲಿಸ್ ಸ್ಟೇಷನ್ ಸರ್ಕಲ್ ನಲ್ಲಿ ಹಲವು ಜನ ಬೆಂಕಿಯಾಟ ಪ್ರದರ್ಶನವನ್ನು ವೀಕ್ಷಿಸಿದರು.
ಬೆಂಕಿಯಾಟ ಪ್ರದರ್ಶನದಲ್ಲಿ ಎಂ ಜಿ ಚಂದ್ರಕಾಂತ್, ಹರ್ಷ, ದಯಾನಂದ್, ದೀಪು, ಚೇತನ್, ಹೇಮಂತ್, ಮಂಜು, ದಿಗಂತ್, ಅಮಿತ್, ಮನೋಜ್, ಸೌರವ್, ಕಿರಣ್, ಗಂಗಾಧರ್, ಡ್ಯಾನಿ, ಇನ್ನಿತರರು ಉಪಸ್ಥಿತರಿದ್ದರು.
ವರದಿ: ಸೂರಜ್ ನಾಯರ್, ಸಾಗರ