ಹುಬ್ಬಳ್ಳಿ: ಶಾಲೆಯಿಂದ ಮನೆಗೆ ಮಕ್ಕಳನ್ನು ( School Children ) ಕರೆದೊಯ್ಯುತ್ತಿದ್ದಂತ ಶಾಲಾ ಬಸ್ ನ ( School Bus ) ರೇಡಿಯೇಟರ್ ಸ್ಪೋಟಗೊಂಡ ಪರಿಣಾಮ, 10ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ಇಂದು ನಡೆದಿದೆ.
ಹುಬ್ಬಳ್ಳಿಯ ಗೋಕುಲ ರೋಡ್ ಸೆಂಟರ್ ಎಕೈಸ್ ಕಾಲೋನಿ ಬಳಿಯಲ್ಲಿ, ಹುಬ್ಬಳ್ಳಿಯ ಚೇತನಾ ಪಬ್ಲಿಕ್ ಶಾಲೆಗೆ ಸೇರಿದಂತ ಶಾಲಾ ಬಸ್ ಮಕ್ಕಳನ್ನು ಶಾಲೆ ಮುಗಿದ ಬಳಿಕ, ಮನೆಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ರೇಡಿಯೇಟರ್ ಸ್ಪೋಟಗೊಂಡಿದೆ.
ಬಸ್ಸಿನ ರೇಡಿಯೇಟರ್ ಸ್ಪೋಟಗೊಂಡ ಪರಿಣಾಮ, ಬಸ್ ನಲ್ಲಿದ್ದಂತ 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯವಾಗಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಗೋಕುಲ ರೋಡ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಘಟನೆ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.