ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ( Karnataka Second PU Exam ) ಫಲಿತಾಂಶ ಪ್ರಕಟಗೊಂಡ ನಂತ್ರ, ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅವಕಾಶ ನೀಡಿತ್ತು. ಆದ್ರೇ ಅನೇಕ ವಿದ್ಯಾರ್ಥಿಗಳಿಗೆ ಸ್ಕ್ಯಾನ್ಡ್ ಪ್ರತಿಯನ್ನು ಪಡೆಯಲು ಸಮಸ್ಯೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಪಿಯು ಮಂಡಳಿಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಾಯವಾಣಿ ಆರಂಭಿಸಿದೆ.
BREAKING NEWS: ರಾಜ್ಯದಲ್ಲಿ ಇಂದು ‘ಕೊರೋನಾ ಪ್ರಕರಣ’ಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ | Covid19 Update
ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಏಪ್ರಿಲ್-ಮೇ 2022ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 18-06-2022ರಂದು ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ 15-07-2022ರವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂಗಾರು ಸಂಸತ್ ಅಧಿವೇಶನ: ಜು.17ರಂದು ಸರ್ವಪಕ್ಷಗಳ ಸಭೆ | Monsoon Parliament session
ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿ ಡೌನ್ ಲೋಡ್ ಮಾಡಿಕೊಂಡ ನಂತ್ರ, ಪರಿಶೀಲನೆ ಮಾಡುವಾಗ ಯಾವುದೇ ಪುಟ ಸ್ಕ್ಯಾನ್ ಆಗಿಲ್ಲದಿದ್ದಲ್ಲಿ ಅಥವಾ ಯಾವುದೇ ರೀತಿಯ ನ್ಯೂನ್ಯತೆಗಳು ಕಂಡು ಬಂದಲ್ಲಿ jdexam.dpue@gmail.com ಗೆ ಮನವಿಯನ್ನು ಕಳುಹಿಸಬಹುದು. ಇದಲ್ಲದೇ ಈ ಬಗ್ಗೆ ಗೊಂದಲ, ಸಮಸ್ಯೆಗಳಿಗಾಗಿ ಸಹಾಯವಾಣಿ ಸಂಖ್ಯೆ 080-23083864, 23083860ಗೆ ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯ ಒಳಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ತಿಳಿಸಿದ್ದಾರೆ.
‘ಶಿವಮೊಗ್ಗ ಜನತೆ’ಗೆ ಗುಡ್ ನ್ಯೂಸ್: ‘ಡಿಸೆಂಬರ್’ನಲ್ಲಿ ‘ವಿಮಾನ ನಿಲ್ದಾಣ’ ಲೋಕಾರ್ಪಣೆ