ಬೆಳಗಾವಿ : ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗಳಿಸಿದಷ್ಟೇ ಶಕ್ತವಾಗಿತ್ತು. ಇದೀಗ ಈ ಬಾರಿ ಒಂದರಿಂದ 9 ಸ್ಥಾನಕ್ಕೆ ಏರಿಕೆ ಕಂಡಿದೆ. ಇದರಲ್ಲಿ ಚಿಕ್ಕೋಡಿ ಕ್ಷೇತ್ರದ ಪ್ರಿಯಾಂಕಾ ಜಾರಕಿಹೊಳಿ ಕೂಡ ಒಬ್ಬರು. ಇದೀಗ ಅಥಣಿ ಕ್ಷೇತ್ರದ ಲಕ್ಷ್ಮಣ ಸವದಿ ಹಾಗೂ ಕುಡಚಿ ಕ್ಷೇತ್ರದ ಮಹೇಂದ್ರ ತಮ್ಮಣ್ಣ ಅವರ ವಿರುದ್ಧ ಆಕ್ರೋಶ ಅವರ ಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನ ಇದ್ದೆ.ಆದರೆ ಮಹೇಂದ್ರ ತಮ್ಮಣ್ಣವರ್ ಅವರು ನನ್ನ ಕೈಗೆ ಸಿಗಲಿಲ್ಲ. ಅಥಣಿಯಲ್ಲೂ ಹಾಗೆ ಆಯಿತು. ಯಾರ ಬಗ್ಗೆಯೂ ಪಕ್ಷದ ವರಿಷ್ಠರಿಗೆ ದೂರು ಕೊಡುವುದಿಲ್ಲ. ಪಕ್ಷದ ವಿರುದ್ಧ ಕೆಲಸ ಮಾಡಿದವರ ಬಗ್ಗೆ ಜನರಿಗೆ ಗೊತ್ತಾಗಬೇಕಿತ್ತು ಅದನ್ನು ಜನರಿಗೆ ಹೇಳುವ ಕೆಲಸ ಮಾಡಿರುವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಲೀಡ್ ಆಗುತ್ತೆ ಅಂದುಕೊಂಡಿದ್ದೆ. ಆದರೆ ಅಥಣಿಯಲ್ಲಿ ಲೀಡ್ ಸಿಕ್ಕಿಲ್ಲ. ಪ್ರಕಾಶ್ ಹುಕ್ಕೇರಿ ಸೇರಿ ಇನ್ನುಳಿದ ನಾಯಕರು ಕೆಲಸ ಮಾಡಿದ್ದಾರೆ. ನನ್ನ ಪುತ್ರಿಯ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಬೇರೆ ಕ್ಷೇತ್ರಗಳಲ್ಲೂ ಮುಖಂಡರು ಪಕ್ಷದ ಪರ ಕೆಲಸ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.