Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವೇದಾಂತ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟ; 10 ಮಂದಿ ಸಾವು, 40 ಜನರಿಗೆ ಗಾಯ !

14/04/2026 6:31 PM

ಟರ್ಕಿ ಶಾಲೆಯಲ್ಲಿ ಗುಂಡಿನ ಅಬ್ಬರ: ವಿದ್ಯಾರ್ಥಿ ನಡೆಸಿದ ದಾಳಿಯಲ್ಲಿ 16 ಮಂದಿಗೆ ಗಾಯ; ಬಳಿಕ ಶೂಟರ್ ಆತ್ಮಹತ್ಯೆ

14/04/2026 6:21 PM

ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದ ಸ್ಥಗಿತಗೊಳಿಸಿದ ಇಟಲಿ: ಪ್ರಧಾನಿ ಮೆಲೋನಿ ಕಠಿಣ ನಿರ್ಧಾರ

14/04/2026 6:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳಗಾವಿಯಲ್ಲಿ ಪೆಟ್ರೋಲ್, ಡೀಸೆಲ್ ಅಭಾವದ ವದಂತಿ: ಬಂಕ್‌ ಗಳಿಗೆ ಮುಗಿಬಿದ್ದ ವಾಹನ ಸವಾರರು !
KARNATAKA

ಬೆಳಗಾವಿಯಲ್ಲಿ ಪೆಟ್ರೋಲ್, ಡೀಸೆಲ್ ಅಭಾವದ ವದಂತಿ: ಬಂಕ್‌ ಗಳಿಗೆ ಮುಗಿಬಿದ್ದ ವಾಹನ ಸವಾರರು !

By kannadanewsnow5724/03/2026 10:27 AM

ಬೆಳಗಾವಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಕಾರ್ಮೋಡ ಇದೀಗ ಬೆಳಗಾವಿ ಜನರ ನೆಮ್ಮದಿ ಕೆಡಿಸಿದೆ. ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ ಎಂಬ ವದಂತಿ ಹಬ್ಬಿದ್ದು, ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್‌ಗಳಿಗೆ ಜನ ಸಾಗರವೇ ಹರಿದುಬರುತ್ತಿದೆ.

ವದಂತಿಗೆ ಬೆಚ್ಚಿದ ವಾಹನ ಸವಾರರು

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ವಾಟ್ಸಾಪ್‌ನಲ್ಲಿ “ಮುಂದಿನ ೪-೫ ದಿನಗಳ ಕಾಲ ಇಂಧನ ಪೂರೈಕೆ ಸ್ಥಗಿತಗೊಳ್ಳಲಿದೆ” ಎಂಬ ಸಂದೇಶಗಳು ಭಾರಿ ವೇಗದಲ್ಲಿ ಹರಿದಾಡುತ್ತಿವೆ. ಯುದ್ಧದ ಪರಿಣಾಮವಾಗಿ ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಾಗಲಿದೆ ಎಂಬ ಆತಂಕ ಸವಾರರನ್ನು ಪೆಟ್ರೋಲ್ ಬಂಕ್‌ಗಳತ್ತ ಓಡುವಂತೆ ಮಾಡಿದೆ.

ನಗರದಾದ್ಯಂತ ಟ್ರಾಫಿಕ್ ಜಾಮ್

ಬೆಳಗಾವಿಯ ಪ್ರಮುಖ ಬಡಾವಣೆಗಳಾದ ಸದಾಶಿವ ನಗರ, ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಗಾಂಧಿ ನಗರ ಹಾಗೂ ಚೆನ್ನಮ್ಮ ಸರ್ಕಲ್ ವ್ಯಾಪ್ತಿಯ ಪೆಟ್ರೋಲ್ ಬಂಕ್‌ಗಳಲ್ಲಿ ನೂರಾರು ಮೀಟರ್‌ಗಳಷ್ಟು ಉದ್ದದ ಸಾಲುಗಳು ಕಂಡುಬಂದಿವೆ.

ಕ್ಯಾನ್‌ಗಳಲ್ಲಿ ಇಂಧನ ಸಂಗ್ರಹ: ಜನರು ಕೇವಲ ವಾಹನಗಳಿಗೆ ಮಾತ್ರವಲ್ಲದೆ, ಭವಿಷ್ಯದ ಮುನ್ನೆಚ್ಚರಿಕೆಯಾಗಿ ವಾಟರ್ ಬಾಟಲ್ ಮತ್ತು ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿಯೂ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುತ್ತಿದ್ದಾರೆ.

ಗೊಂದಲದ ವಾತಾವರಣ: ಈಗಾಗಲೇ ಅಡುಗೆ ಅನಿಲದ (LPG) ಕೊರತೆಯ ಭೀತಿ ಎದುರಿಸುತ್ತಿರುವ ಜನರಿಗೆ, ಈಗ ವಾಹನ ಸಂಚಾರವೂ ಸ್ಥಗಿತಗೊಳ್ಳಬಹುದು ಎಂಬ ಗೊಂದಲ ತೀವ್ರವಾಗಿದೆ. ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಅಂತಹ ಯಾವುದೇ ಗಂಭೀರ ವ್ಯತ್ಯಯ ಉಂಟಾಗಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ವದಂತಿಗಳಿಂದಾಗಿ ಜನರು ಅನಗತ್ಯವಾಗಿ ಗಾಬರಿಗೊಂಡು ಬಂಕ್‌ಗಳಿಗೆ ಮುಗಿಬೀಳುತ್ತಿರುವುದು ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ.

Rumors of petrol and diesel shortage in Belgaum: Motorists flock to petrol stations!
Share. Facebook Twitter LinkedIn WhatsApp Email

Related Posts

ರಾಜಣ್ಣ ಆಯ್ತು, ಈಗ ಜಮೀರ್ ಸಚಿವ ಸಂಪುಟದಿಂದ ಔಟ್: ರೇಣುಕಾಚಾರ್ಯ ಸ್ಫೋಟಕ ಭವಿಷ್ಯ!

14/04/2026 5:48 PM1 Min Read

SHOCKING: ರಾಜ್ಯದಲ್ಲೋಂದು ಬೆಚ್ಚಿ ಬೀಳಿಸೋ ಘಟನೆ: ನನ್ನಂತೆ ಕಾಣುತ್ತಿಲ್ಲವೆಂದು ಮಗನನ್ನೇ ಕೊಂದ ತಂದೆ!

14/04/2026 5:35 PM1 Min Read

BREAKING : ಕಲ್ಬುರ್ಗಿಯಲ್ಲಿ ಘೋರ ಘಟನೆ : ಬಾವಿಯಲ್ಲಿ, ಕೈ ಕಟ್ಟಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆ!

14/04/2026 5:27 PM1 Min Read
Recent News

BREAKING : ವೇದಾಂತ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟ; 10 ಮಂದಿ ಸಾವು, 40 ಜನರಿಗೆ ಗಾಯ !

14/04/2026 6:31 PM

ಟರ್ಕಿ ಶಾಲೆಯಲ್ಲಿ ಗುಂಡಿನ ಅಬ್ಬರ: ವಿದ್ಯಾರ್ಥಿ ನಡೆಸಿದ ದಾಳಿಯಲ್ಲಿ 16 ಮಂದಿಗೆ ಗಾಯ; ಬಳಿಕ ಶೂಟರ್ ಆತ್ಮಹತ್ಯೆ

14/04/2026 6:21 PM

ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದ ಸ್ಥಗಿತಗೊಳಿಸಿದ ಇಟಲಿ: ಪ್ರಧಾನಿ ಮೆಲೋನಿ ಕಠಿಣ ನಿರ್ಧಾರ

14/04/2026 6:17 PM

ರಾಜಣ್ಣ ಆಯ್ತು, ಈಗ ಜಮೀರ್ ಸಚಿವ ಸಂಪುಟದಿಂದ ಔಟ್: ರೇಣುಕಾಚಾರ್ಯ ಸ್ಫೋಟಕ ಭವಿಷ್ಯ!

14/04/2026 5:48 PM
State News
KARNATAKA

ರಾಜಣ್ಣ ಆಯ್ತು, ಈಗ ಜಮೀರ್ ಸಚಿವ ಸಂಪುಟದಿಂದ ಔಟ್: ರೇಣುಕಾಚಾರ್ಯ ಸ್ಫೋಟಕ ಭವಿಷ್ಯ!

By kannadanewsnow0914/04/2026 5:48 PM KARNATAKA 1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ಆಂತರಿಕ ಭಿನ್ನಮತದ ಚರ್ಚೆಗಳು ಜೋರಾಗಿವೆ. ಈ ಕುರಿತು ಮಾತನಾಡಿರುವ ಮಾಜಿ…

SHOCKING: ರಾಜ್ಯದಲ್ಲೋಂದು ಬೆಚ್ಚಿ ಬೀಳಿಸೋ ಘಟನೆ: ನನ್ನಂತೆ ಕಾಣುತ್ತಿಲ್ಲವೆಂದು ಮಗನನ್ನೇ ಕೊಂದ ತಂದೆ!

14/04/2026 5:35 PM

BREAKING : ಕಲ್ಬುರ್ಗಿಯಲ್ಲಿ ಘೋರ ಘಟನೆ : ಬಾವಿಯಲ್ಲಿ, ಕೈ ಕಟ್ಟಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆ!

14/04/2026 5:27 PM

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ; 17 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ

14/04/2026 5:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.