ಮೈಸೂರು: ರಾಜ್ಯ ಸರ್ಕಾರದ ಬಗ್ಗೆ ಪದೇ ಪದೇ ದೂರುವುದು ಸರಿಯಲ್ಲ. ಕೆಲವೊಂದು ಸುತ್ತೋಲೆಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. 100 ರೂ ಸಂಗ್ರಹ ಸಂಬಂಧ ಹೊರಡಿಸಿರುವಂತ ಸುತ್ತೋಲೆ ಶಿಕ್ಷಣ ಇಲಾಖೆಯಿಂದ ಹೊರಡಿಸಿರೋದಾಗಿದೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಸ್ಪಷ್ಟ ಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಲಾ ಶ್ರೇಯೋಭಿವೃದ್ಧಿಗಾಗಿ 100 ರೂ ಸಂಗ್ರಹಿಸೋದಕ್ಕೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಸುತ್ತೋಲೆಗೂ, ಶಿಕ್ಷಣ ಸಚಿವರು, ಸಿಎಂಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಚಿತ್ರದುರ್ಗ ಮೂಲಕ ತುಮಕೂರು – ದಾವಣಗೆರೆ ‘ರೈಲ್ವೆ ಸಂಪರ್ಕ ಯೋಜನೆ’ ಪ್ರಾರಂಭಿಸಲು ಕ್ರಮ – ಸಿಎಂ ಬೊಮ್ಮಾಯಿ
ಈ ಬಗ್ಗೆ ಕೆಲವರು ಸರಿಯಾಗಿ ಓದಿಕೊಳ್ಳದೇ ಪ್ರತಿಕ್ರಿಯೆ ನೀಡಿದ್ದಾರೆ. ಎಸ್ ಡಿ ಎಂಸಿಗಳ ಸಲಹೆ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲಾ ಸುತ್ತೋಲೆಗಳನ್ನು ಸರ್ಕಾರದ ಗಮನಕ್ಕೆ ತಂದು ಹೊರಡಿಸಬೇಕಿಲ್ಲ. ಹಣ ಸಂಗ್ರಹಿಸಲು ಆರ್ ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಆರ್ ಟಿಇ ಒಳ್ಳೆಯ ಕಾಯ್ದೆಯಾಗಿದೆ. ಅದನ್ನು ಜಾರಿಗೆ ತಂದಿದ್ದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆಗಿದೆ. ಪೋಷಕರು ಕಡ್ಡಾಯವಾಗಿ ಶಾಲಾ ಶ್ರೇಯೋಭಿವೃದ್ಧಿಗೆ ಹಣ ಕೊಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಅವರಾಗಿಯೇ ತಿಂಗಳಿಗೆ ರೂ.100 ಕೊಟ್ಟರೇ ರಸೀದಿ ಕೊಡಬೇಕು. ಇದರಲ್ಲೂ ಸಿದ್ಧರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಾಗ್ಧಾಳಿ ನಡೆಸಿದರು.
ಗಂಗಾವತಿಯಲ್ಲಿ ಮೆರವಣಿಗೆ ವೇಳೆ ರಾಷ್ಟ್ರಧ್ವಜಕ್ಕೆ ಅಪಮಾನ: ಮೂವರ ವಿರುದ್ಧ FIR ದಾಖಲು
ಶಿಕ್ಷಣ ಇಲಾಖೆಯಿಂದ ಶಾಲಾ ಶ್ರೇಯೋಭಿವೃದ್ಧಿಗೆ ಎಸ್ ಡಿಎಂಸಿಯಿಂದ 100 ರೂ ಸಂಗ್ರಹಿಸಲು ಹೊರಡಿಸಲಾಗಿರುವಂತ ಕ್ರಮದಲ್ಲಿ, ಹಣ ದುರುಪಯೋಗ ಆದರೇ ಸುತ್ತೋಲೆಯನ್ನ ಹಿಂಪಡೆಯಲಾಗುತ್ತದೆ ಎಂಬುದಾಗಿ ತಿಳಿಸಿದರು.