ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿದ್ದಂತ ರಸ್ತೆಯೊಂದು, ನಿರ್ಮಾಣ ಮಾಡಿದಂತ ನಾಲ್ಕು ತಿಂಗಳಿನಲ್ಲಿಯೇ ಕಿತ್ತು ಹೋಗಿದೆ. ಹೀಗಾಗಿ ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.
9 ಜನರನ್ನು ಬಲಿ ಪಡೆದ ‘ನರಭಕ್ಷಕ ಹುಲಿ’ : ಕಂಡಲ್ಲಿ ಗುಂಡಿಕ್ಕಲು ಬಿಹಾರ ಸರ್ಕಾರ ಆದೇಶ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗವಟೂರು ಗ್ರಾಮಕ್ಕೆ ಗವಟೂರು – ಮಾವಿನಸರ ಮಾರ್ಗವಾಗಿ ಸಾಗುವಂತ ರಸ್ತೆಯನ್ನು 4.41 ಕೋಟಿ ರೂ ವೆಚ್ಚದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಿರ್ಮಿಸಲಾಗಿತ್ತು.
ಕಾಲು ಮುರಿದಿದ್ದರೂ ಕಾಮನ್ವೆಲ್ತ್ ಚಿನ್ನ ಗೆದ್ದೆ: ರೋಚಕ ಸಂಗತಿ ಬಿಚ್ಚಿಟ್ಟ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು
ಸುಮಾರು 5.13 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಕುಂದಾಪುರ ಮೂಲದ ಗುತ್ತಿಗೆದಾರರು ಪಡೆದು ನಿರ್ಮಿಸಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ನಿರ್ಮಿಸಿದ್ದಂತ ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ಕೈಯಲ್ಲಿ ಕಿತ್ತರೇ ಸಾಕು ಕಿತ್ತು ಬರುತ್ತಿದೆ. ಜೊತೆಗೆ ಕೆಲ ಕಡೆಗಳಲ್ಲಿ ಈಗಾಗಲೇ ಕಿತ್ತು ಹೋಗಿರೋದಕ್ಕೆ ಗವಟೂರು ಗ್ರಾಮಸ್ಥರು ಕಳಪೆ ಕಾಮಗಾರಿ ಮಾಡಿದಂತ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ರಸ್ತೆಯನ್ನು ಮರು ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.