ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಆದರೆ ದರ್ಶನ್ ಗೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಖುದ್ದು ಪರಿಶೀಲ ನಡೆಸುವಂತೆ ಮನವಿ ಮಾಡಿದ್ದರು.ವಾದ ಪ್ರತಿವಾದ ಆಲಿಸಿದ ಬಳಿಕ ನಿನ್ನೆ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಆದೇಶ ಕಾಯ್ದಿರಿಸಿತ್ತು ಇದೀಗ ಎಂದು ಆದೇಶ ಪ್ರಕಟಸಲಿದೆ
ಈ ಅರ್ಜಿ ಕುರಿತು ನೆನ್ನೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಸಿಕ್ಯೂಶನ್ ವಾದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಡ್ಜ್ ಕುರಿತು ಪರಿಶೀಲಿಸಿದರೆ ಪ್ರಾಜೆಕ್ಯೂಷನ್ಗೆ ಭಯ ಏಕೆ? ಸವಲತ್ತು ನೀಡಿದೆಯೋ ಇಲ್ಲವೋ ಎಂದು ಕೋರ್ಟ್ ಪರಿಶೀಲಿಸಬೇಕು ಎಂದು ದರ್ಶನ್ ಪರವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲೇಖಿಸಿ ವಾದಿಸಿದರು.
ಅರ್ಜಿಗೆ ಎಸ್ ಪಿ ಪಿ ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು ಅರ್ಜಿ ಊರ್ಜಿತವಲ್ಲ ಎಂದು ಪರಿಗಣಿಸಿ ವಜಾಗೊಳಿಸಲು ಪ್ರಸನ್ನ ಕುಮಾರ್ ಮನವಿ ಮಾಡಿದರು. ಅಪರಾಧ ನಡೆದ ಸ್ಥಳಕ್ಕೆ ಭೇಟಿ ಮಾಡಲು ಅವಕಾಶವಿದೆ. ಸಾಕ್ಷಿ ಭೇಟಿಗೆ ಅವಕಾಶ ಇದೆ. ಆದರೆ ಇಲ್ಲಿ ಅಂತಹ ಸಂದರ್ಭ ಬರಲ್ಲ ಎಂದು ವಾದ ಮಂಡಿಸಿದರು.
ಪ್ರಕರಣದಲ್ಲಿ ಇನ್ನು ಸಾಕ್ಷಿಯ ವಿಚಾರಣೆಯೇ ಆರಂಭವಾಗಿಲ್ಲ. ಟ್ರಯಲ್ ವಿಳಂಬಿಸಲು ಒಂದಾದ ಮೇಲೊಂದು ಅರ್ಜಿ ಸಲ್ಲಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ತ್ವರಿತ ವಿಚಾರಣೆಗೆ ಸೂಚನೆ ನೀಡಿದೆ. ಸವಲತ್ತು ಪರಿಶೀಲಿಸಲು ಜೈಲಿಗೆ ತೆರಳುವ ಅಗತ್ಯವಿಲ್ಲ ಎಂದು ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದಿಸಿದರು.