Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಇಸ್ರೇಲ್’ನ ‘ಡೆಲ್ಟಾ ಗಲಿಲ್’ ಜತೆ ಭಾರತದಲ್ಲಿ ಕಾರ್ಯತಂತ್ರ ಪಾಲುದಾರಿಕೆ ಘೋಷಿಸಿದ ‘ರಿಲಯನ್ಸ್ ರೀಟೇಲ್’
BUSINESS

‘ಇಸ್ರೇಲ್’ನ ‘ಡೆಲ್ಟಾ ಗಲಿಲ್’ ಜತೆ ಭಾರತದಲ್ಲಿ ಕಾರ್ಯತಂತ್ರ ಪಾಲುದಾರಿಕೆ ಘೋಷಿಸಿದ ‘ರಿಲಯನ್ಸ್ ರೀಟೇಲ್’

By kannadanewsnow0910/09/2024 8:10 PM

ಮುಂಬೈ : ಭಾರತದ ಮುಂಚೂಣಿ ರೀಟೇಲರ್ ಆದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಹಾಗೂ ಇಸ್ರೇಲ್ ನ ಡೆಲ್ಟಾ ಗಲಿಲ್ ಇಂಡಸ್ಟ್ರೀಸ್ ಸಂಬಂಧಿಸಿದಂತೆ ಮಂಗಳವಾರದಂದು ಪ್ರಮುಖ ಘೋಷಣೆ ಹೊರಬಿದ್ದಿದೆ. ಇದರೊಂದಿಗೆ ಭಾರತದಲ್ಲಿ ಈ ಎರಡೂ ಕಂಪನಿಗಳು ಕಾರ್ಯತಂತ್ರ ಪಾಲುದಾರಿಕೆಯನ್ನು ಪ್ರಕಟಿಸಿವೆ.

ಶೇಕಡಾ 50/50ರ ಜಂಟಿ ಉದ್ಯಮ ಇದಾಗಿದೆ. ಡೆಲ್ಟಾ ಗಲಿಲ್ ಟೆಲ್ ಅವಿವ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿದೆ. ಈ ಸಂಸ್ಥೆಯು ಜಾಗತಿಕ ದಿರಿಸು ಉತ್ಪಾದಕರಾಗಿ ಗುರುತಿಸಿಕೊಂಡಿದ್ದು, ಜತೆಗೆ ಮಾರ್ಕೆಟಿಂಗ್ ಸಹ ಮಾಡುತ್ತದೆ. ಬ್ರ್ಯಾಂಡೆಡ್ ಬಟ್ಟೆಗಳು, ಖಾಸಗಿ ಲೇಬಲ್ ಗಳನ್ನು ಒಳಗೊಂಡ ದಿರಿಸುಗಳನ್ನು ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ತಯಾರಿಸುತ್ತದೆ. ಇದರಲ್ಲಿ ಡೆನಿಮ್ ಬಟ್ಟೆಗಳು ಸೇರಿವೆ. ಇನ್ನು ಈಗ ರಿಲಯನ್ಸ್ ರೀಟೇಲ್ ಹಾಗೂ ಡೆಲ್ಟಾ ಗಲಿಲ್ ಒಟ್ಟಾಗಿ ಭಾರತದ ಬಟ್ಟೆ ಮಾರುಕಟ್ಟೆಯನ್ನು ಪುನರ್ ವ್ಯಾಖ್ಯಾನಿಸುವ ಗುರಿಯನ್ನು ಇರಿಸಿಕೊಂಡಿವೆ.

ಈ ಪಾಲುದಾರಿಕೆ ಉದ್ದೇಶ ಏನೆಂದರೆ, ಭಾರತೀಯ ಗ್ರಾಹಕರ ವಿಶಿಷ್ಟ ಬೇಡಿಕೆಗಳನ್ನು ಪೂರೈಸುವ ದಿರಿಸುಗಳ ನವೀನ ರೀತಿಯ ವೇದಿಕೆಯನ್ನು ಆರಂಭಿಸುವುದಾಗಿದೆ. ಡೆಲ್ಟಾ ಗಲಿಲ್ ತನ್ನ ನವೀನ ಬಗೆಯ ಹಾಗೂ ಉತ್ಪನ್ನಗಳ ಶ್ರೇಷ್ಠತೆಗೆ ದೊಡ್ಡ ಮಟ್ಟದ ಹೆಸರಾಗಿದೆ. ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಹೆಜ್ಜೆಗುರುತನ್ನು ವಿಸ್ತರಿಸುವುದಕ್ಕೆ ಈ ಜಂಟಿ ಉದ್ಯಮ ಸಹಕಾರಿ ಆಗುತ್ತದೆ. ಗಲಿಲ್ ಸಂಸ್ಥೆಯ ಸುಂದರ ಉಡುಪುಗಳ ಪೋರ್ಟ್ ಫೋಲಿಯೋ ವ್ಯಾಪಕವಾಗಿದ್ದು, ಗ್ರಾಹಕರ ಮೆಚ್ಚುಗೆಯನ್ನು ಸಹ ಪಡೆದಿದೆ. ಅವುಗಳನ್ನು ರೀಟೇಲ್, ಹೋಲ್ ಸೇಲ್ ಹಾಗೂ ಡಿಜಿಟಲ್ ಚಾನೆಲ್ ಗಳ ಮೂಲಕವಾಗಿ ಖರೀದಿಸಲು ಈ ಸಹಯೋಗದೊಂದಿಗೆ ಅನುವಾಗುತ್ತದೆ. ಇದೇ ವೇಳೆ ಈಗಾಗಲೇ ಹೆಸರಾಗಿರುವ ರಿಲಯನ್ಸ್ ರೀಟೇಲ್ ನ ಸ್ವಂತ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ವಿನ್ಯಾಸ ಮಾಡುವುದಕ್ಕೆ ಹಾಗೂ ತಯಾರಿಸುವುದಕ್ಕೆ ಡೆಲ್ಟಾ ಗಲಿಲ್ ಬೆಂಬಲ ನೀಡುತ್ತದೆ.

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ವಿ ಸುಬ್ರಮಣ್ಯಂ ಮಾತನಾಡಿ , “ಡೆಲ್ಟಾ ಗಲಿಲ್‌ನ ಇಂಟಿಮೇಟ್ ಉಡುಪು ಮತ್ತು ಆಕ್ವಿವ್ ಉಡುಪುಗಳಲ್ಲಿ ಜಾಗತಿಕ ಆವಿಷ್ಕಾರಕ ಎಂಬ ಖ್ಯಾತಿಯನ್ನು ಹೊಂದಿದ್ದು, ಅದನ್ನು ರಿಲಯನ್ಸ್‌ನ ಗುಣಮಟ್ಟ ಮತ್ತು ಬದ್ಧತೆಯ ಸಂಕಲ್ಪದ ಜೊತೆ ತಲುಪಿಸುತ್ತದೆ. ಇದರೊಂದಿಗೆ ಭಾರತೀಯ ಗ್ರಾಹಕರಿಗೆ ನವೀನ ಉತ್ಪನ್ನಗಳು ತಲುಪಿಸುತ್ತೇವೆ. ಒಟ್ಟಾಗಿ, ನಮ್ಮ ರೀಟೇಲ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ಇಂಟಿಮೇಟ್ ಉಡುಪು ಮತ್ತು ಆಕ್ಟಿವ್ ಉಡುಪುಗಳ ವಿಭಾಗಗಳಲ್ಲಿ ಗ್ರಾಹಕರಿಗೆ ದೊರೆಯುವಂಥ ಆಫರ್ ಗಳನ್ನು ಹೆಚ್ಚಿಸಲು ನಾವು ಸಿದ್ಧರಾಗಿದ್ದೇವೆ,” ಎಂದಿದ್ದಾರೆ.

ಡೆಲ್ಟಾ ಗಲಿಲ್‌ ಸಿಇಒ ಐಸಾಕ್ ದಬಾಹ್ ಮಾತನಾಡಿ , “ರಿಲಯನ್ಸ್ ರೀಟೇಲ್ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರೀಟೇಲ್ ಕಂಪನಿಗಳಲ್ಲಿ ಒಂದಾಗಿದೆ ಮತ್ತು 140 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಭಾರತದ ಗ್ರಾಹಕ ಮಾರುಕಟ್ಟೆಗೆ ನಾವು ಪ್ರವೇಶಿಸಲು ನೋಡುತ್ತಿರುವಾಗ ರಿಲಯನ್ಸ್ ಕಂಪನಿಯೊಂದಿಗೆ ಪಾಲುದಾರರಾಗಲು ತುಂಬಾ ಹೆಮ್ಮೆಪಡುತ್ತೇವೆ,” ಎಂದು ಹೇಳಿದ್ದಾರೆ.

“ಈ ಸಹಯೋಗವು ನಮ್ಮ ಉತ್ಪನ್ನ ವಿನ್ಯಾಸ, ನಾವೀನ್ಯತೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ರಿಲಯನ್ಸ್ ರೀಟೇಲ್‌ನ ವ್ಯಾಪಕವಾದ ರೀಟೇಲ್ ನೆಟ್‌ವರ್ಕ್ ಮತ್ತು ವಿತರಣಾ ವ್ಯಾಪ್ತಿಯೊಂದಿಗೆ ಸಂಯೋಜಿಸಲು ಅನುವು ಮಾಡಿಕೊಡುತ್ತದೆ. ಇದು ದೇಶಾದ್ಯಂತ ಇಂಟಿಮೇಟ್ ಉಡುಪು ಮತ್ತು ಆಕ್ಟಿವ್ ಉಡುಪುಗಳ ವರ್ಗಗಳ ವೇಗವರ್ಧಿತ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಪುರುಷರ ಮತ್ತು ಮಹಿಳೆಯರ ಇಂಟಿಮೇಟ್ ದಿರಿಸುಗಳಿಗೆ ಮುಂದಿನ 18 ತಿಂಗಳಲ್ಲಿ ಡೆಲ್ಟಾ ಫ್ಯಾಮಿಲಿ ಲೈಫ್‌ಸ್ಟೈಲ್ ಸ್ಟೋರ್‌ಗಳು ಮತ್ತು ಅಥೇನಾ ಬ್ರ್ಯಾಂಡ್‌ನೊಂದಿಗೆ ಮುಂದುವರಿಸುವುದಕ್ಕೆ ರಿಲಯನ್ಸ್‌ನೊಂದಿಗೆ ಈ ಪ್ರಯಾಣ ಪ್ರಾರಂಭಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದಿದ್ದಾರೆ.

ಭಾರತದಲ್ಲಿನ ಅತಿ ದೊಡ್ಡ ರೀಟೇಲ್ ಕಂಪನಿಯಾಗಿ ರಿಲಯನ್ಸ್ ರಿಟೇಲ್ ಬಹಳ ದೊಡ್ಡ ಮಟ್ಟದಲ್ಲಿ ದೇಶೀಯ ಮಾರಾಟ ಮತ್ತು ವಿತರಣಾ ಪರಿಣತಿಯನ್ನು ಹೊಂದಿದೆ. ಈ ಜಂಟಿ ಉದ್ಯಮವು ರಿಲಯನ್ಸ್ ರೀಟೇಲ್‌ಗೆ ಡೆಲ್ಟಾ ಗಲಿಲ್‌ನ ಉದ್ಯಮದ ಪರಿಣತಿ ಮತ್ತು ಇಂಟಿಮೇಟ್ ಉಡುಪು ಮತ್ತು ಆಕ್ಟಿವ್ ಉಡುಪುಗಳಲ್ಲಿನ ನಾವೀನ್ಯತೆ ಸಾಮರ್ಥ್ಯಗಳನ್ನು ಇನ್ನೂ ಹೆಚ್ಚು ಅರಿಯಲು ಅನುವು ಮಾಡಿಕೊಡುತ್ತದೆ. ಅಂದ ಹಾಗೆ ಇದು ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹವಾಗಿ ಬೆಳೆಯಲು ಸಿದ್ಧವಾಗಿರುವ ಪ್ರಮುಖ ಉತ್ಪನ್ನ ವಿಭಾಗಗಳಾಗಿವೆ.

IAF ವಿಂಗ್ ಕಮಾಂಡರ್ ವಿರುದ್ಧ ಮಹಿಳಾ ಫ್ಲೈಯಿಂಗ್ ಆಫೀಸರ್ ಅತ್ಯಾಚಾರ ಆರೋಪ: FIR ದಾಖಲು | IAF Wing Commander

ಬೆಂಗಳೂರಲ್ಲಿ ‘ಪೌರ ಕಾರ್ಮಿಕರ ಸೇವೆ ಕಾಯಂ’ ಪ್ರಕ್ರಿಯೆ ಶೀಘ್ರವೇ ಪೂರ್ಣ: BBMP ಮುಖ್ಯ ಆಯುಕ್ತರು

BIG UPDATE : ಯಜಮಾನಿಯರಿಗೆ ಗುಡ್ ನ್ಯೂಸ್ : ಕೊನೆಗೂ 1 ತಿಂಗಳ ‘ಗೃಹಲಕ್ಷ್ಮಿ’ ಹಣ ಖಾತೆಗೆ ಜಮಾ!

Share. Facebook Twitter LinkedIn WhatsApp Email

Related Posts

2026ರ ವಿಧಾನಸಭಾ ಚುನಾವಣೆ: ಮಾದರಿ ಚುನಾವಣಾ ನೀತಿ ಸಂಹಿತೆ ಅಂದ್ರೆ ಏನು? ಇಲ್ಲಿದೆ ಮಾಹಿತಿ

15/03/2026 7:30 PM2 Mins Read

BREAKING: ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಪುದುಚೇರಿ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ

15/03/2026 5:01 PM5 Mins Read

BREAKING: ಭಾರತದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ, ಇಲ್ಲಿದೆ ಪುಲ್ ಡೀಟೆಲ್ಸ್ | Assembly Election 2026

15/03/2026 4:53 PM5 Mins Read
Recent News

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM

ಸುರಕ್ಷಿತ ಲೈಂಗಿಕತೆ: ಆರೋಗ್ಯಕರ ಜೀವನಕ್ಕೆ ಒಂದು ಮಾರ್ಗದರ್ಶಿ, ಇಲ್ಲಿದೆ ಟಿಪ್ಸ್

15/03/2026 9:43 PM
State News
KARNATAKA

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

By kannadanewsnow0915/03/2026 10:37 PM KARNATAKA 1 Min Read

​ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್‌ ಅವರೊಂದಿಗಿನ ತಮ್ಮ ಒಡನಾಟ ಮತ್ತು ಲಂಕೇಶ್‌ ಪತ್ರಿಕೆಯಲ್ಲಿ…

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.