ನವದೆಹಲಿ: ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ( Commonwealth Games 2022 ) ಭಾರತದ ಪದಕದ ಬೇಟೆ ಮುಂದುವರೆದಿದೆ. 9ನೇ ದಿನವಾದಂತ ಇಂದು ಕುಸ್ತಿಯಲ್ಲಿ ಭಾರತದ ರವಿ ಕುಮಾರ್ ದಹಿಯಾ ( Ravi Kumar Dahiya ) ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ.
Railway Jobs : ಉದ್ಯೋಗ ನಿರೀಕ್ಷಿತರಿಗೆ ಗುಡ್ ನ್ಯೂಸ್ : ‘1.4 ಲಕ್ಷ ಹುದ್ದೆ’ಗಳ ಭರ್ತಿಗೆ ಮುಂದಾದ ಭಾರತೀಯ ರೈಲ್ವೆ
ಭಾರತದ ರವಿ ಕುಮಾರ್ ದಹಿಯಾ 10-0 (ತಾಂತ್ರಿಕ ಶ್ರೇಷ್ಠತೆ) ನೈಜೀರಿಯಾದ ಎಬಿಕೆವೆನಿಮೊ ವೆಲ್ಸನ್ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕುಸ್ತಿಯಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನ ಇದಾಗಿದೆ.
1/2@ravidahiya60 is on spree to win medals for India 🇮🇳
Many congratulations 🎊 #Cheer4India#IndiaCWG2022
— SAI Media (@Media_SAI) August 6, 2022
ಮತ್ತೊಂದೆಡೆ ಮಹಿಳಾ ಕುಸ್ತಿ 50 ಕೆಜಿ ಫ್ರೀಸ್ಟೈಲ್ನಲ್ಲಿ ಪೂಜಾ ಗೆಹ್ಲೋಟ್ 12-2 ರಿಂದ ಸ್ಕಾಟ್ಲೆಂಡ್ನ ಕ್ರಿಸ್ಟೆಲ್ ಲೆಮೊಫಾಕ್ ಲೆಟ್ಚಿಡ್ಜಿಯೊ ಅವರನ್ನು ಸೋಲಿಸಿದರು. ಇದರೊಂದಿಗೆ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.