ರಾಮನಗರ : ಇಂದು ರವಿವಾರ ಹಿನ್ನೆಲೆ ಸ್ನೇಹಿತರ ಜೊತೆಗೆ ಕಾಲ ಕಳೆಯಲು ಹಲವರು ಪಿಕ್ ನಿಕ್ ಎಂದು ಹೊರಗಡೆ ಹೋಗುತ್ತಾರೆ. ಅದೇ ರೀತಿಯಾಗಿ ರಾಮನಗರ ಜಿಲ್ಲೆಯಲ್ಲಿ ರೆಸಾರ್ಟ್ ಒಂದಕ್ಕೆ ಸ್ನೇಹಿತರ ಜೊತೆಗೆ ತೆರಳಿದ್ದ ಮಹಿಳೆಯೊಬ್ಬರು ಜಿಪ್ ಲೈನ್ ಆಟ ಆಡುವಾಗ ತುಂಡಾಗಿ ನೆಲಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ ನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ ಅತ್ತಿಬೆಲೆ ಮೂಲ ರಂಜನಿ (35) ಎನ್ನುವ ಮಹಿಳೆ ಮೃತ ದುರ್ದೈವಿ ಎಂದು ಹೇಳಲಾಗುತ್ತಿದೆ.ಸ್ನೇಹಿತರ ಜೊತೆಗೆ ಜಂಗಲ್ ಟ್ರಯಲ್ಸ್ ರೆಸಾರ್ಟಿಗೆ ರಂಜನಿ ಬಂದಿದ್ದರು ಎನ್ನಲಾಗಿದೀ.
ಈ ವೇಳೆ ಅಲ್ಲಿನ ಹಲವು ಚಟುವಟಿಕೆಗಳಲ್ಲಿ ಭಾಗಿಯಾದಾಗ ಜಿಪ್ ಲೈನ್ ತುಂಡಾಗಿ ಬಿದ್ದಿದ್ದರಿಂದ ನೆಲಕ್ಕೆ ಬಿದ್ದು ರಂಜನಿ ಇದೀಗ ಸಾವನ್ನಪ್ಪಿದ್ದಾರೆ.ರಜನಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ರೆಸಾರ್ಟ್ ಮ್ಯಾನೇಜರ್ ಪುಟ್ಟಮಾದುವನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.