ರಾಮನಗರ : ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಆಯಾತಪ್ಪಿ ಬಿದ್ದು ಮಹಿಳೆಯೋರ್ವಳು ಮೃತಪಟ್ಟ ದುರ್ಘಟನೆ ರಾಮನಗರ ಪಟ್ಟಣದ ಹೊರವಲಯದಲ್ಲಿರುವ ಬೋಳಪ್ಪನಕೆರೆಯಲ್ಲಿ ನಡೆದಿದೆ.ಅದೃಷ್ಟವಶಾತ್ ಮಕ್ಕಳು ಬದುಕುಳಿದಿವೆ.
ಮೃತ ಮಹಿಳೆಯನ್ನು ರೇಣುಕಮ್ಮ (30) ಎಂದು ಹೇಳಲಾಗುತ್ತಿದೆ. ಮೃತ ಮಹಿಳೆಯನ್ನು ಕೋಡಿಪುರ ನಿವಾಸಿ ಎಂದು ಹೇಳಲಾಗುತ್ತಿದೆ. ಇಂದು ತನ್ನಿಬ್ಬರು ಮಕ್ಕಳೊಂದಿಗೆ ಬಟ್ಟೆ ತೊಳೆಯಲು ಬೋಳಪ್ಪನಕೆರೆಗೆ ರೇಣುಕಮ್ಮ ಹೋಗಿದ್ದಾಳೆ. ಇಳಿಯುವ ವೇಳೆ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾಳೆ.
ಬಿದ್ದ ಬಳಿಕ ಸಹಾಯಕ್ಕೆ ಕಿರುಚಾಡಿರುವ ಮಹಿಳೆ ಜೊತೆಗಿದ್ದ ಮಕ್ಕಳ ಚಿಕ್ಕವಯಸ್ಸಿನವು ಸಹಾಯ ಮಾಡಲಾಗದೆ ತಾಯಿ ಮುಳುಗುತ್ತಿದ್ದರು ಕೂಡ ಮಕ್ಕಳು ಸಹ ಅಸಹಾಯಕವಾಗಿ ನಿಂತು ನೋಡಿದ್ದರೆ. ಅಕಸ್ಮಾತ್ ಮಕ್ಕಳು ಕೂಡ ಹಾರಿದ್ದರೆ ತಾಯಿ ಜೊತೆ ಮಕ್ಕಳು ಸಾವನ್ನಪ್ಪುತ್ತಿದ್ದರು. ಅದೃಷ್ಟವಶಾತ್ ಮಕ್ಕಳು ಬದುಕುಳಿದಿವೆ.ಘಟನೆ ಬಳಿಕ ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಮಹಿಳೆಯ ಮೃತದೇಹ ಹೊರತೆಗೆದಿದ್ದಾರೆ.