Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೇಟ್ಸ್ ಟಾಕ್ ಸೆಕ್ಸ್: ದಾಂಪತ್ಯ ಜೀವನ ಹಳಸುವ ಮುನ್ನವೇ ಎಚ್ಚರಿಸುವ ಈ ಪ್ರಮುಖ ಸಂಕೇತಗಳನ್ನು ನಿರ್ಲಕ್ಷಿಸಬೇಡಿ!

ಕೊನೆಗೂ ಅಮೆರಿಕ-ಇರಾನ್ ಯುದ್ಧ ಅಂತ್ಯ: 107 ದಿನಗಳಲ್ಲಿ ಮೃತಪಟ್ಟವರು, ಖರ್ಚಾದ ಹಣ ಎಷ್ಟು ಗೊತ್ತಾ?

​ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ: ಜೂನ್ 23-24 ರಂದು ಉನ್ನತ ಮಟ್ಟದ ಮಹತ್ವದ ಮಾತುಕತೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತುಮಕೂರು ಬಳಿ ರೈಲ್ವೆ ಕಾಮಗಾರಿ ಹಿನ್ನಲೆ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ
KARNATAKA

ತುಮಕೂರು ಬಳಿ ರೈಲ್ವೆ ಕಾಮಗಾರಿ ಹಿನ್ನಲೆ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳಾದ ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್’ವೇನಲ್ಲಿ ಗರ್ಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ, ಹಾಗೂ ನಿಡವಂದ ಮತ್ತು ಹಿರೇಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್–28 ರಲ್ಲಿನ ಕಾಮಗಾರಿಗಳಿಂದಾಗಿ, ಈ ಕೆಳಗೆ ವಿವರಿಸಿದಂತೆ ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಭಾಗಶಃ ರದ್ದುಗೊಳಿಸಲಾಗಿದೆ, ಮಾರ್ಗ ಬದಲಾಯಿಸಲಾಗಿದೆ, ನಿಯಂತ್ರಿಸಲಾಗಿದೆ ಮತ್ತು ಮರು-ವೇಳಾಪಟ್ಟಿ ಮಾಡಲಾಗಿದೆ.

I. ರೈಲುಗಳ ರದ್ದತಿ:

ದಿನಾಂಕ 17.12.2025 ಮತ್ತು 24.12.2025 ರಂದು ರೈಲು ಸಂಖ್ಯೆ 16239 ಚಿಕ್ಕಮಗಳೂರು – ಯಶವಂತಪುರ ದೈನಂದಿನ ಎಕ್ಸ್ ಪ್ರೆಸ್, ರೈಲು ಸಂಖ್ಯೆ 16240 ಯಶವಂತಪುರ – ಚಿಕ್ಕಮಗಳೂರು ದೈನಂದಿನ ಎಕ್ಸ್ ಪ್ರೆಸ್ & ರೈಲು ಸಂಖ್ಯೆ 12614 ಕೆಎಸ್ಆರ್ ಬೆಂಗಳೂರು – ಮೈಸೂರು ದೈನಂದಿನ ಎಕ್ಸ್ ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

II. ರೈಲುಗಳ ಭಾಗಶಃ ರದ್ದತಿ:

1. ದಿನಾಂಕ 17.12.2025, 20.12.2025, 21.12.2025 ಮತ್ತು 24.12.2025 ರಂದು, ರೈಲು ಸಂಖ್ಯೆ 66567 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ತನ್ನ ಸಂಚಾರವನ್ನು ಕೊನೆಗೊಳಿಸುತ್ತದೆ.

2. ದಿನಾಂಕ 17.12.2025, 20.12.2025, 21.12.2025 ಮತ್ತು 24.12.2025 ರಂದು, ರೈಲು ಸಂಖ್ಯೆ 66572 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸುತ್ತದೆ.

3. ದಿನಾಂಕ 17.12.2025, 20.12.2025, 21.12.2025 ಮತ್ತು 24.12.2025 ರಂದು, ರೈಲು ಸಂಖ್ಯೆ 20652 ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.

4. ದಿನಾಂಕ 17.12.2025, 20.12.2025, 21.12.2025 ಮತ್ತು 24.12.2025 ರಂದು, ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಅರಸೀಕೆರೆಯ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ.

5. ದಿನಾಂಕ 17.12.2025 ಮತ್ತು 24.12.2025 ರಂದು, ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.

6. ದಿನಾಂಕ 17.12.2025 ಮತ್ತು 24.12.2025 ರಂದು, ರೈಲು ಸಂಖ್ಯೆ 66571 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.

7. ದಿನಾಂಕ 17.12.2025 ಮತ್ತು 24.12.2025 ರಂದು, ರೈಲು ಸಂಖ್ಯೆ 66568 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.

8. ದಿನಾಂಕ 17.12.2025 ಮತ್ತು 24.12.2025 ರಂದು, ರೈಲು ಸಂಖ್ಯೆ 56281 ಚಾಮರಾಜನಗರ–ತುಮಕೂರು ಪ್ಯಾಸೆಂಜರ್ ರೈಲು ಚಿಕ್ಕಬಾಣಾವರ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ಚಿಕ್ಕಬಾಣಾವರದಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.

III. ರೈಲುಗಳ ಮಾರ್ಗ ಬದಲಾವಣೆ:

1. ದಿನಾಂಕ 16.12.2025 ಮತ್ತು 23.12.2025 ರಂದು ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಇದು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಗದಿತ ನಿಲುಗಡೆ ಇರುವುದಿಲ್ಲ.

2. ದಿನಾಂಕ 16.12.2025 ಮತ್ತು 23.12.2025 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 17316 ವೇಲಂಕಣಿ–ವಾಸ್ಕೋ ಡ ಗಾಮ ಎಕ್ಸ್ ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಗದಿತ ನಿಲುಗಡೆ ಇರುವುದಿಲ್ಲ.

3. ದಿನಾಂಕ 17.12.2025, 20.12.2025, 21.12.2025 ಮತ್ತು 24.12.2025 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 17326 ಮೈಸೂರು–ಬೆಳಗಾವಿ ಎಕ್ಸ್ ಪ್ರೆಸ್ ರೈಲು ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ಪಾಂಡವಪುರದಿಂದ ತಿಪಟೂರಿನವರೆಗಿನ ನಿಲುಗಡೆಗಳನ್ನು ಇರುವುದಿಲ್ಲ.

4. ದಿನಾಂಕ 17.12.2025, 20.12.2025, 21.12.2025 ಮತ್ತು 24.12.2025 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16579 ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಮತ್ತು ತಿಪಟೂರು ನಿಲುಗಡೆಗಳನ್ನು ಇರುವುದಿಲ್ಲ.

IV. ರೈಲುಗಳ ನಿಯಂತ್ರಣ

1. ದಿನಾಂಕ 17.12.2025 ಮತ್ತು 24.12.2025 ರಂದು ತಮ್ಮ ಮೂಲ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22685 ಯಶವಂತಪುರ–ಚಂಡೀಗಢ ಎಕ್ಸ್ ಪ್ರೆಸ್, 17309 ಯಶವಂತಪುರ–ವಾಸ್ಕೋ ಡ ಗಾಮ ಎಕ್ಸ್ ಪ್ರೆಸ್ ಮತ್ತು 20651 ಕೆಎಸ್ಆರ್ ಬೆಂಗಳೂರು–ತಾಳಗುಪ್ಪ ಎಕ್ಸ್ ಪ್ರೆಸ್ ರೈಲುಗಳು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣವಾಗಲಿವೆ.

2. ದಿನಾಂಕ 19.12.2025 ಮತ್ತು 20.12.2025 ರಂದು ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ ಪ್ರೆಸ್ ರೈಲು ಪ್ರಯಾಣದ ಸಮಯದಲ್ಲಿ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

V. ರೈಲುಗಳ ಮರು-ವೇಳಾಪಟ್ಟಿ (Rescheduling):

1. ದಿನಾಂಕ 15.12.2025 ಮತ್ತು 22.12.2025 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 19667 ಉದಯಪುರ ಸಿಟಿ–ಮೈಸೂರು ವೀಕ್ಲಿ ಹಮ್’ಸಫರ್ಎಕ್ಸ್ ಪ್ರೆಸ್ ರೈಲು ಉದಯಪುರ ಸಿಟಿಯಿಂದ 180 ನಿಮಿಷ, ಮತ್ತು ರೈಲು ಸಂಖ್ಯೆ 22497 ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಹಮ್’ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಶ್ರೀ ಗಂಗಾನಗರದಿಂದ 120 ನಿಮಿಷ ತಡವಾಗಿ ಹೊರಡಲಿವೆ. ಅಲ್ಲದೆ, ರೈಲು ಸಂಖ್ಯೆ 22497 ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.

2. ದಿನಾಂಕ 17.12.2025 ಮತ್ತು 24.12.2025 ರಂದು ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ , 56282 ತುಮಕೂರು–ಚಾಮರಾಜನಗರ ದೈನಂದಿನ ಪ್ಯಾಸೆಂಜರ್ ಮತ್ತು 12777 ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ಉತ್ತರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳು ತಮ್ಮ ಮೂಲ ನಿಲ್ದಾಣಗಳಿಂದ 120 ನಿಮಿಷಗಳು ತಡವಾಗಿ ಹೊರಡಲಿವೆ.

BREAKING: ‘ಧರ್ಮಸ್ಥಳ ಷಡ್ಯಂತ್ರ’ ಕೇಸ್: ರಾಜ್ಯದ ಪ್ರಭಾವಿ ಸ್ವಾಮೀಜಿ ಭೇಟಿಯಾಗಿದ್ದ ‘ಬುರುಡೆ ಗ್ಯಾಂಗ್’

ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ

Share. Facebook Twitter LinkedIn WhatsApp Email

Related Posts

ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುವ ‘ಕಾಮುಕ ಮೇಸ್ತ್ರಿ ನಾಗರಾಜ್’ ಬಂಧಿಸಿ; ಡಿಎಸ್ಎಸ್ ಒತ್ತಾಯ

2 Mins Read

ವಿಜಯಪುರದಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

1 Min Read

ಮಂಡ್ಯದ ಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ ಸಾಧನೆ: 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 55 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

2 Mins Read
Recent News

ಲೇಟ್ಸ್ ಟಾಕ್ ಸೆಕ್ಸ್: ದಾಂಪತ್ಯ ಜೀವನ ಹಳಸುವ ಮುನ್ನವೇ ಎಚ್ಚರಿಸುವ ಈ ಪ್ರಮುಖ ಸಂಕೇತಗಳನ್ನು ನಿರ್ಲಕ್ಷಿಸಬೇಡಿ!

ಕೊನೆಗೂ ಅಮೆರಿಕ-ಇರಾನ್ ಯುದ್ಧ ಅಂತ್ಯ: 107 ದಿನಗಳಲ್ಲಿ ಮೃತಪಟ್ಟವರು, ಖರ್ಚಾದ ಹಣ ಎಷ್ಟು ಗೊತ್ತಾ?

​ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ: ಜೂನ್ 23-24 ರಂದು ಉನ್ನತ ಮಟ್ಟದ ಮಹತ್ವದ ಮಾತುಕತೆ!

ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುವ ‘ಕಾಮುಕ ಮೇಸ್ತ್ರಿ ನಾಗರಾಜ್’ ಬಂಧಿಸಿ; ಡಿಎಸ್ಎಸ್ ಒತ್ತಾಯ

State News
KARNATAKA

ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುವ ‘ಕಾಮುಕ ಮೇಸ್ತ್ರಿ ನಾಗರಾಜ್’ ಬಂಧಿಸಿ; ಡಿಎಸ್ಎಸ್ ಒತ್ತಾಯ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಸಾಗರ ನಗರಸಭೆಯ ಮಹಿಳಾ ಪೌರಕಾರ್ಮಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರೂ, ನಗರಸಭೆ ಪೌರಕಾರ್ಮಿಕರ ಮೇಸ್ತ್ರಿ ನಾಗರಾಜ ಸ್ವಾಮಿಯನ್ನು…

ವಿಜಯಪುರದಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

ಮಂಡ್ಯದ ಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ ಸಾಧನೆ: 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ 55 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

ಸಾಗರದ ಉಳ್ಳೂರಿನ ‘ಸರ್ಕಾರಿ ಪ್ರೌಢಶಾಲೆ’ಯ ‘ಶೌಚಾಲಯದ ಪರಿಕರ’ಗಳನ್ನೇ ಕಿಡಿಗೇಡಿಗಳು ಧ್ವಂಸ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.