ಬೆಂಗಳೂರು: ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್ ಕುಮಾರ್ ( Actor Puneeth Rajkumar ) ನಮ್ಮನ್ನು ಅಗಲಿ ನಾಳೆಗೆ ಒಂದು ವರ್ಷ ಆಗಲಿದೆ. ಈ ಹಿನ್ನಲೆಯಲ್ಲಿ ಅಪ್ಪು ಸ್ಮಾರಕದ ಬಳಿಯಲ್ಲಿ ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆಯವರೆಗೆ ಗಾನ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತರಾಗಿ 100ಕ್ಕೂ ಹೆಚ್ಚು ಗಾಯಕರು ಭಾಗವಹಿಸಿ ಅಪ್ಪು ಸ್ಮರಣೆ ಮಾಡಲಿದ್ದಾರೆ.
ಹೌದು ಕರ್ನಾಟಕ ಫಿಲ್ಮ್ ಮ್ಯೂಸಿಕಲ್ ಅಸೋಸಿಯೇಷನ್ ನಿಂದ ನಟ, ಸಂಗೀತ ನಿರ್ದೇಶ ಸಾಧುಕೋಕಿಲ ನೇತೃತ್ವದಲ್ಲಿ ಇಂದು ರಾತ್ರಿಯಿಂದ ನಾಳೆಯವರೆಗೆ ಅಪ್ಪು ಸ್ಮರಣೆಯನ್ನು ಸಂಗೀತ ಸುಧೆಯ ಮೂಲಕ ಮಾಡಲಾಗುತ್ತದೆ. ನಟ ಪುನೀತ್ ರಾಜ್ ಕುಮಾರ್ ಅವರ ಸ್ಮಾರಕ ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ಗಾನ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
BIGG NEWS: ನಾನು ಯಾರಿಂದಲೂ ಛೀ, ಥೂ ಅನ್ನಿಸಿಕೊಂಡು ಅಧಿಕಾರ ಮಾಡಿಲ್ಲ; ಸಿದ್ದರಾಮಯ್ಯ ಸ್ಪಷ್ಟನೆ
ಈ ಗಾನ ನಮನ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಕಲಾವಿಧರು ಭಾಗಿಯಾಗಲಿದ್ದಾರೆ. ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಗೀತೆಗಳ ಗಾಯನ ಸುಧೆಯನ್ನು ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆಯವರೆಗೆ ಹರಿಸಲಿದ್ದಾರೆ.
ಎನ್ಎಚ್ಎಐ ಇನ್ವಿಐಟಿಯ ಚಿಲ್ಲರೆ ಮಾರಾಟ ಭಾಗವು ಮುಂದುವರಿಯುತ್ತದೆ: ನಿತಿನ್ ಗಡ್ಕರಿ
ಸ್ವಯಂ ಪ್ರೇರಿತವಾಗಿ ಗಾಯಕ ಹರಿಕೃಷ್ಣ, ರವಿಶಂಕರಗೌಡ, ಹರ್ಷ, ಸಂಜಿತ್ ಹೆಗ್ಡೆ, ಹೇಮಂತ್ ಸೇರಿದಂತೆ ಅನೇಕರು ಭಾಗಿಯಾಗಿ ಹಾಡಿ, ದಿವಂಗತ ಪುನೀತ್ ರಾಜ್ ಕುಮಾರ್ ಗೆ ಗಾನ ನಮನವನ್ನು ಸಲ್ಲಿಸಲಿದ್ದಾರೆ.
ನಾಳೆ ದಿನ 24 ಗಂಟೆಯವೂ ಅಭಿಮಾನಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಕನ್ನಡದಲ್ಲೇ ಹಾಡು ಹಾಡಲು ಅವಕಾಶವನ್ನು ಆಯೋಜಕರು ಮಾಡಿಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಐಪಿ, ವಿವಿಐಪಿಗಳಿಗೂ ಯಾವುದೇ ವಿಶೇಷ ಆಸದನ ವ್ಯವಸ್ಥೆ ಕೂಡ ಮಾಡಿಲ್ಲ. ಎಲ್ಲರಿಗೂ ಸಮಾನ ಆಸನದ ವ್ಯವಸ್ಥೆಯನ್ನು ಕರ್ನಾಟಕ ಫಿಲ್ಮ್ ಮ್ಯೂಸಿಕಲ್ ಅಸೋಸಿಷೇಯನ್ ಮಾಡಿದೆ.