ಬೆಂಗಳೂರು: ರಾಜ್ಯದಲ್ಲೇ ತಲ್ಲಣವನ್ನು ಸೃಷ್ಠಿಸಿದ್ದಂತ 545 ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ( PSI Recruitment Scam ) ಸಂಬಂಧ ಹೈಕೋರ್ಟ್ ಗೆ ( Karnataka High Court ) ಬಂಧಿತ ಐವರು ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಇಂದು ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಸಂಬಂಧ ಬಂಧನಕ್ಕೆ ಒಳಗಾಗಿದ್ದಂತ ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಏಕಸದಸ್ಯ ಪೀಠವು ವಜಾಗೊಳಿಸಿದೆ.
Viral Video: ನೀರೆಂದುಕೊಂಡು ಬಿಯರ್ ಕುಡಿದ ಕೋಳಿಗಳು… ಮುಂದೇನಾಯ್ತು ಅಂತಾ ಇಲ್ಲಿ ನೋಡಿ!
ಅಕ್ರಮವೆಸಗಿದ ಸಂಬಂಧ ಬಂಧಿಸಲ್ಪಟ್ಟಿದ್ದಂತ ಸಿಎನ್ ಶಶಿಧರ್, ದಿಲೀಪ್ ಕುಮಾರ್, ಸೂರ್ಯನಾರಾಯಣ, ರಘುವೀರ್ ಹಾಗೂ ನವೀನ್ ಪ್ರಸಾದ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಆರೋಪಿಗಳ ಪೈಕಿ ನವೀನ್ ಪ್ರಸಾದ್ ಬ್ಯಾಡರಹಳ್ಳಿಯ ಪಿಎಸ್ಐ ಆಗಿದ್ದಾರೆ.
ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ರಾಜ್ಯ ಸಚಿವ ಸಂಪುಟದಿಂದ ಶೂ, ಸಾಕ್ಸ್ ವಿತರಣೆಗೆ 123 ಕೋಟಿ ಅನುದಾನಕ್ಕೆ ಅನುಮೋದನೆ