ಬೆಂಗಳೂರು: ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ( President Draupadi Murmu ) ಅವರು ವಿಧಾನಸೌಧದ ( Vidhan Soudha ) ಬ್ಯಾಂಕ್ವೆಟ್ ಹಾಲ್ ನಲ್ಲಿನ ಪೌರಸನ್ಮಾನ ಕಾರ್ಯಕ್ರಮದ ಹಿನ್ನಲೆಯಲ್ಲಿ, ನಾಳೆ ನಾಲ್ಕು ಇಲಾಖೆಗಳಿಗೆ ಹಾಗೂ ವಿಧಾನಸೌಧದಲ್ಲಿರುವಂತ ಕಚೇರಿಯ ಸಿಬ್ಬಂದಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
BIG BREAKING NEWS: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ ನಡ್ಡಾ 2ನೇ ಅವಧಿಗೆ ಮುಂದುವರಿಕೆ | JP Nadda
ಈ ಕುರಿತಂತೆ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ದಿನಾಂಕ 27-09-2022ರಂದು ಗೌರವಾನ್ವಿತ ರಾಷ್ಟ್ರಪತಿಯವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿರುವ ಪೌರಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ಸುರಕ್ಷತೆ ಹಾಗೂ ಭದ್ರತೆ ದೃಷ್ಠಿಯಿಂದ ವಿಧಾನಸೌಧದ ಆರ್ಥಿಕ ಇಲಾಖೆ, ಒಳಾಡಳಿತ ಇಲಾಖೆ, ಕಾನೂನು ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆಯ ಕಚೇರಿಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದಿದ್ದಾರೆ.
‘ಮೈಸೂರು ದಸರಾ ವೀಕ್ಷಣೆ’ಗೆ ತೆರಳೋರಿಗೆ ಗುಡ್ ನ್ಯೂಸ್: KSRTCಯಿಂದ ‘450 ವಿಶೇಷ ಸಾರಿಗೆ ಬಸ್’ ವ್ಯವಸ್ಥೆ
ಇನ್ನೂ ನಾಳೆಯ ರಾಷ್ಟ್ರಪತಿಯವರ ವಿಧಾನಸೌಧದ ಕಾರ್ಯಕ್ರಮದ ಹಿನ್ನಲೆಯಲ್ಲಿ ವಿಧಾನಸೌಧದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತಿರುವ ಎಲ್ಲಾ ಕಚೇರಿಗಳಿಗೂ ದಿನಾಂಕ 27-09-2022ರ ಮಂಗಳವಾರದ ನಾಳೆ ರಜೆ ಘೋಷಣೆ ಮಾಡಿದ್ದಾರೆ.