ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಇಲಾಖೆ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಮೇ 31ಕ್ಕೆ ಪ್ರಜ್ವಲ್ ರೇವಣ್ಣನ ಸಂಸದ ಸ್ಥಾನ ಅಂತ್ಯವಾಗುತ್ತದೆ ಪ್ರಜ್ವಲ್ ರೇವಣ್ಣ ಯಾವುದೇ ಕಾರಣಕ್ಕೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಾನು ಪ್ರಜ್ವಲ್ ವಿಡಿಯೋ ಗಮನಿಸಿದ್ದೇನೆ. ಬ್ಲೂ ಕರ್ನರ್ ನೋಟಿಸ್ ಮೂಲಕ ತನಿಖೆ ಆಗುತ್ತಿತ್ತು. ಈಗ ವಾಪಸ್ ಬರುತ್ತೇನೆ ಎಂದು ತಿಳಿಸಿದ್ದಾರೆ. ಕಾನೂನು ಮೂಲಕ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಮೇ 31ಕ್ಕೆ ಸಂಸದ ಸ್ಥಾನ ಅಂತ್ಯವಾಗುತ್ತದೆ.ಬಳಿಕ ರಾಜ ತಾಂತ್ರಿಕ ಪಾಸ್ಪೋರ್ಟ್ ಅಂತ್ಯವಾಗುತ್ತದೆ.ಇದೆಲ್ಲವನ್ನು ತಿಳಿದು ಮರಳಿ ಬರಲು ತೀರ್ಮಾನಿಸಿದ್ದಾರೆ.
ವಿಡಿಯೋದಲ್ಲಿ ಷಡ್ಯಂತರ ಇದೆ ಅನ್ನೋ ಆರೋಪ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು ಎಸ್ಐಟಿ ಅಧಿಕಾರಿಗಳು ಇದರ ಬಗ್ಗೆ ಗಮನಿಸುತ್ತಾರೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು.