ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸುಮಾರು 107 ಸಾಹಿತಿಗಳು, ಬುದ್ಧಿ ಜೀವಿಗಳು ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ಅವರ ಅಶೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರು ಕೆಲವು ಪ್ರಮುಖವಾದಂತಹ ಅಂಶಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಪತ್ರದಲ್ಲಿ ವೀರಭದ್ರಪ್ಪ, ಕೆ ನೀಲಾ, ಸೇರಿದಂತೆ ಒಟ್ಟು 107 ಸಾಹಿತಿಗಳ ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಸಾಹಿತಿಗಳು ಉಲ್ಲೆಖಿಸಿದ ಪ್ರಮುಖ ಅಂಶಗಳು
1) ಪ್ರಜ್ವಲರನ್ನು ಕೂಡಲೇ ಬಂಧಿಸಿ ಐಟಿ ಐಪಿಸಿ ಕಾಯ್ದೆ ಅಡಿ ಕೆಸ್ ಹಾಕಿ
2) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪ್ರಚಾರಪ ಮಾಡುತ್ತಿರುವ ರಾಜಕಾರಣಿಗಳಿಗೆ ಕಡಿವಾಣ ಹಾಕಿ
3) ಎಸ್ ಐ ಟಿ ಅಧಿಕಾರಿಯ ತನಿಖೆಯು ಕಾಲಮಿತಿಯೊಳಗೆ ಕೊನೆಗೊಳ್ಳಬೇಕು.
4) ಪ್ರಜ್ವಲ್ ಜೊತೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು
5) ಪ್ರಜ್ವಲ್ ಮಾಜಿ ಕಾರು ಚಾಲ ಕಾರ್ತಿಕ ಗೌಡನನ್ನು ಕೂಡಲೇ ಬಂಧಿಸಬೇಕು.
6) ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಗಂಭೀರ ಪ್ರಕರಣ ಹಾಕಬೇಕು.
7) ವಿಡಿಯೋಗಳನ್ನು ಹಂಚಿದವರ ವಿರುದ್ಧ ಕೂಡ ಮೊಕದ್ದಮೆ ಹೂಡಬೇಕು.
8) ಎಲ್ಲಾ ಗೊತ್ತಿದ್ದು ಮಾಹಿತಿ ನೀಡಿದ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರಗಳನ್ನ ಸಂಚಿನ ಭಾಗ ಎಂದು ಪರಿಗಣಿಸಬೇಕು
9) ವಿಡಿಯೋಗಳು ಐದಾರು ವರ್ಷಗಳ ಹಿಂದಿನದು ಎಂದು ರೇವಣ್ಣ ಕುಟುಂಬ ಸದಸ್ಯರ ವಿರುದ್ಧ ಕೆಎಸ್ ಹಾಕಬೇಕು.
ಹೀಗೆ ಸುಮಾರು ಇನ್ನು ಹಲವಾರು ಅಂಶಗಳನ್ನು ಉಲ್ಲೇಖಿಸಿ ಸುಮಾರು 107 ಸಾಹಿತಿಗಳು ಪತ್ರದಲ್ಲಿ ಸಹಿ ಹಾಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.