ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ನಂತರ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮೇ.15ರಂದು ಸ್ವದೇಶಕ್ಕೆ ಮರಳಿ ಎಸ್‌ಐಟಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಬುಧವಾರ ಪ್ರಜ್ವಲ್ ಭಾರತಕ್ಕೆ ಮರಳಿಲ್ಲ. ಹಾಗಾಗಿ ಎಸ್‌ಐಟಿಯ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.
ಕಳೆದ 15 ದಿನಗಳ ಹಿಂದೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಪ್ರಕಾರಕ್ಕೆ ಸಂಬಂಧಿಸಿದಂತೆ ಗುರು ದಾಖಲಾಗಿತ್ತು ಈ ಹಿನ್ನೆಲೆಯಲ್ಲಿ ಪ್ರಜ್ವಲ್ ವಿದೇಶದಲ್ಲೆ ಇದ್ದುಕೊಂಡು ಕಾನೂನು ಹೋರಾಟಕ್ಕೆ ಮುಂದಾಗಿದ್ದರು ಈ ಕುರಿತಂತೆ ಎಸ್ಐಟಿ ಹಲವಾರು ಬಾರಿ ನೋಟಿಸ್ ನೀಡಿದರು ವಿಚಾರಣೆಗೆ ಅವರು ಹಾಜರಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಎಸ್ಐಟಿ ತಂಡ ಸಿಐಡಿ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಮೊದಲಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಿತ್ತು. ಅದಕ್ಕೂ ಯಾವುದೇ ರೀತಿಯಾಗಿ ಸ್ಪಂದಿಸದೆ ಇರುವ ಕಾರಣ ನಂತರ ಇತ್ತೀಚಿಗೆ ರೆಡ್ ಕಾರ್ನರ್ ನೋಟಿಸ್ ಕೂಡ ನೀಡಲಾಯಿತು.ಈ ಮೂಲಕ ಇಂಟರ್ ಪೋಲ್ ಪ್ರಜ್ವಲ್ ರೇವಣ್ಣ ಅವರ ಚಲನ ವಲನ ಹಾಗೂ ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಅವರ ಚಟುವಟಿಕೆಗಳ ಮೇಲೆ ನಿಗಾ ಇಡುವ ಒಂದು ನೋಟಿಸ್ ಆಗಿದೆ.
ಎಸ್‌ಐಟಿ ನೀಡಿದ ನೋಟಿಸ್‌ಗೆ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದ ಅವರು, ವಿಚಾರಣೆಗೆ ಹಾಜರಾಗಲು 7 ದಿನಗಳ ಸಮಯ ಕೇಳಿದ್ದರು. ಇನ್ನು ಪ್ರಜ್ವಲ್ ಬಗ್ಗೆ ಅವರ ಕುಟುಂಬದವರು ಸಹ ಯಾವುದೇ ಮಾಹಿತಿ ನೀಡದೆ ಮೌನವಹಿಸಿದ್ದಾರೆ. ಹೀಗಾಗಿ ಪ್ರಜ್ವಲ್ ಎಲ್ಲಿದ್ದಾರೆ ಎಂಬುದು ಇದುವರೆಗೆ ಖಚಿತವಾಗಿಲ್ಲ.
ಸಂಸದ ಪ್ರಜ್ವಲ್ ರೇವಣ್ಣ ಯೂರೋಪ್‌ನಲ್ಲೇ ಇದ್ದಾರೆ ಎಂಬ ಮಾಹಿತಿಯನ್ನು ರಾಜ್ಯದ ಉನ್ನತ ಪೊಲೀಸ್ ಮೂಲಗಳು ನೀಡುತ್ತಿವೆ. ಅಲ್ಲದೆ ಸಂಸದರ ಲೊಕೇಷನ್ ಬಗ್ಗೆ ಎಸ್‌ಐಟಿಗೆ ಖಚಿತ ಮಾಹಿತಿ ಸಿಕ್ಕಿದೆ. ಅವರ ಚಲನವಲನಗಳ ಕುರಿತು ತನಿಖಾ ತಂಡ ಬೆನ್ನತ್ತಿವೆ. ಇನ್ನು ಯುರೋಪ್‌ನಲ್ಲಿ ಬ್ರಿಟನ್ ಹಾಗೂ ಸ್ವಿಜರ್ಲೆಂಡ್ ದೇಶ ಹೊರತುಪಡಿಸಿದರೆ ಇನ್ನುಳಿದ ದೇಶಗಳಿಗೆ ಒಂದೇ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸಬಹುದು. ಈ ಅವಕಾಶವನ್ನು ಬಳಸಿಕೊಂಡು ಯೂರೋಪ್‌ನಲ್ಲಿ ಪ್ರಜ್ವಲ್ ಸುತ್ತಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.